More

    ವೀರಶೈವ ಲಿಂಗಾಯತ ಮತಗಳ ಮಾರಾಟಕ್ಕಿಲ್ಲ: ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷ ಎಂ.ಬಿ.ರಾಜಶೇಖರ್ ಸ್ಪಷ್ಟನೆ

    ಮಂಡ್ಯ: ಯಾವುದೋ ಒಂದು ಪಕ್ಷಕ್ಕೆ ನಮ್ಮ ಮತಗಳು ಸೀಮಿತವಾಗಿದೆ ಎಂದು ವೀರಶೈವ ಲಿಂಗಾಯಿತ ಸಂಘಟನೆಯ ಕೆಲ ಪದಾಧಿಕಾರಿಗಳು ನೀಡಿರುವ ಹೇಳಿಕೆಯನ್ನು ಖಂಡನೀಯ. ಸಮಾಜದ ಮತಗಳು ಮಾರಾಟಕ್ಕಿಲ್ಲ ಎಂದು ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷ ಎಂ.ಬಿ.ರಾಜಶೇಖರ್ ಸ್ಪಷ್ಟಪಡಿಸಿದರು.
    ಮತದಾನ ಪವಿತ್ರವಾದ ಹಬ್ಬವಾಗಿದೆ. ನಿರ್ಭಿತಿಯಿಂದ ಧೈರ್ಯದಿಂದ ಎಲ್ಲರೂ ಮತದಾನ ಮಾಡಬೇಕು. ಆದರೆ ಸಮಾಜದ ಕೆಲವರು ಒಬ್ಬ ವ್ಯಕ್ತಿಗೆ ಒಂದು ಪಕ್ಷಕ್ಕೆ ನಮ್ಮ ಸಮುದಾಯದ ಮತ ಎಂದು ಬಿಂಬಿಸುತ್ತಿರುವುದು ಖಂಡನೀಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಮಾತನಾಡಿ, ಕೆಲ ವ್ಯಕ್ತಿಗಳು ಮತ್ತು ಸಂಘಟನೆಯ ಪದಾಧಿಕಾರಿಗಳು ನಮ್ಮ ಸಮುದಾಯ ನಿರ್ದಿಷ್ಟ ಪಕ್ಷಕ್ಕೆ ಬೆಂಬಲ ನೀಡುತ್ತವೆಂದು ಹೇಳಿದ್ದಾರೆ. ಇದನ್ನು ಖಂಡಿಸುತ್ತೇವೆ. ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಗೆ ಮತ ಹಾಕುತ್ತೇವೆನ್ನುವ ಹಕ್ಕನ್ನು ನಾವು ಯಾರಿಗೂ ನೀಡಿಲ್ಲ. ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಹೇಳಿದರು.
    ಸಂಘಟನೆಯ ಎಸ್.ಆನಂದ್, ಬಿ.ಜಿ.ಮಂಜುನಾಥ್, ರುದ್ರಸ್ವಾಮಿ, ಶಿವಕುಮಾರ್, ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts