More

    ಮೇವಿನ ಬಿತ್ತನೆ ಬೀಜ, ನಾಟಿ ಕೋಳಿ ವಿತರಣೆ

    ಹುಣಸೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತರಿಗೆ ನೀಡಲಾದ ಮೇವಿನ ಬಿತ್ತನೆಬೀಜ ಮತ್ತು ನಾಟಿ ಕೋಳಿಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಿತರಿಸಿದರು.

    ನಗರದ ಇಲಾಖೆ ಆವರಣದಲ್ಲಿ ಗುರುವಾರ ರೈತಮಹಿಳೆಯರಿಗೆ ನಾಟಿ ಕೋಳಿ ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ತೀವ್ರ ಬರವಿದೆ. ರಾಜ್ಯ ಸರ್ಕಾರ ಬರನಿರ್ವಹಣೆ ಕಾರ್ಯದಲ್ಲಿ ಕೈಗೊಂಡಿರುವ ಕಾರ್ಯಕ್ರಮ ಸಮಾಧಾನ ತಂದಿಲ್ಲ. ನೆಪಮಾತ್ರಕ್ಕೆ ಸರ್ಕಾರ ಬರ ನಿರ್ವಹಣೆ ಕಾಮಗಾರಿ ಕೈಗೊಂಡಿದೆ. ಪ್ರಸ್ತುತ ಸಾಲಿನಲ್ಲಿ ರೈತರಿಗೆ ಕೃಷಿ ಪರಿಕರಗಳಾಗಲೀ, ಯಂತ್ರೋಪಕರಣಗಳಾಗಲೀ ಯಾವುದೇ ಯೋಜನೆಯಡಿ ನೀಡಿಲ್ಲ. ಗ್ಯಾರಂಟಿ ಕಾರಣವೊಡ್ಡಿ ರೈತರನ್ನು ಸರ್ಕಾರ ಶೋಷಿಸುತ್ತಿದೆ ಎಂದು ಆರೋಪಿಸಿದರು.

    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಮಾತನಾಡಿ, ತಾಲೂಕಿನ 7500 ಫಲಾನುಭವಿಗಳಿಗೆ ತಲಾ 5 ಕೆ.ಜಿ.ತೂಕದ ಮೇವಿನ ಬಿತ್ತನೆ ಬೀಜ, 1000 ಮಂದಿ ರೈತರಿಗೆ 6ಕೆಜಿ ತೂಕದ ಮುಸುಕಿನ ಜೋಳದ ಬಿತ್ತನೆ ಬೀಜ, 100 ಮಂದಿ ರೈತರಿಗೆ ಒಂದೂವರೆ ಕೆಜಿ ತೂಕದ ಜಾಬ್ರಾ ಅಕ್ಕಿ(ಕೊಂಬಿನಕ್ಕಿ)ಯನ್ನು ವಿತರಿಸಲಾಗುತ್ತಿದೆ. ಅಲ್ಲದೆ 106 ರೈತಮಹಿಳೆಯರಿಗೆ 5 ವಾರದ ನಾಟಿಕೋಳಿಗಳನ್ನು ವಿತರಿಸಲಾಗುತ್ತಿದೆ ಎಂದರು.

    ನಗರಸಭಾ ಸದಸ್ಯ ಎಚ್.ಪಿ.ಸತೀಶ್‌ಕುಮಾರ್, ಪಶುವೈದ್ಯರಾದ ಡಾ.ವಿವೇಕ್, ಡಾ.ಭರತ್, ಡಾ.ದರ್ಶನ್ ಮತ್ತು ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts