More

    ಒಂಬತ್ತು ಜಿಲ್ಲೆಗಳ 50 ಸಾವಿರ ಫಲಾನುಭವಿಗಳಿಗೆ 27ರಂದು ಹಕ್ಕುಪತ್ರ ವಿತರಣೆ

    ಚಿತ್ರದುರ್ಗ: ತಾಂಡಾ,ಹಾಡಿ,ಗೊಲ್ಲರಹಟ್ಟಿ,ಹಟ್ಟಿ ಇತರ ಜನ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಲಾಗಿಸಲಾಗಿದ್ದು,ಚಿತ್ರದುರ್ಗ ಸೇರಿ ರಾಜ್ಯದ 9 ಜಿಲ್ಲೆಗಳ ಹೊಸ ಕಂದಾಯ ಗ್ರಾಮಗಳ ಅಂದಾಜು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಸಮಾ ರಂಭ ಮಾ.27ರಂದು ಹಿರಿಯೂರು ತಾಲೂಕು ಹರ್ತಿಕೋಟೆ ಬಳಿ ಏರ್ಪಡಿಸಲಾಗುವುದು ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ತಾಂಡಾ,ಹಾಡಿ,ಗೊಲ್ಲರಹಟ್ಟಿ,ಹಟ್ಟಿ ಸೇರಿ ವಿವಿಧ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಚಿತ್ರದುರ್ಗ,ತುಮಕೂರು,ವಿಜಯನಗರ,ಹಾವೇರಿ,ಬಳ್ಳಾರಿ,ಶಿವಮೊಗ್ಗ,ದಾ ವಣಗೆರೆ,ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದ್ದಾರೆ.

    ಒಂಬತ್ತು ಜಿಲ್ಲೆಗಳ ಪೈಕಿ ಚಿತ್ರದುರ್ಗದ ಫಲಾನುಭವಿಗಳು(12 ಸಾವಿರ)ಹೆಚ್ಚಿದ್ದಾರೆ. ಸಮಾರಂಭದಲ್ಲಿ ಫಲಾನುಭವಿಗಳ ಸೇರಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ. ಹಿರಿಯೂರು ತಾಲೂಕು ಹರ್ತಿಕೋಟೆ ಬಳಿ ಆಯೋಜಿಸಲಾಗುವುದು. ಮುಖ್ಯಮಂತ್ರಿ,ಸಚಿವರು ಒಂಬತ್ತು ಜಿಲ್ಲೆಗಳ ಉಸ್ತುವಾರಿ ಸಚಿವರು,ಸಂಸದರು,ಶಾಸಕರು,ಜಿಲ್ಲಾಧಿಕಾರಿಗಳು ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.

    ನಮ್ಮ ಜಿಲ್ಲೆಯ ಅಧಿಕಾರಿಗಳ ಶ್ರಮದಿಂದಾಗಿ ಚಿತ್ರದುರ್ಗದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ವೀರ ವನಿತೆ ಒನಕೆ ಓಬವ್ವ ಜಯಂತಿ,ಫಲಾನುಭ ವಿಗಳ ಸಮಾವೇಶ ಸೇರಿ ಪ್ರಮುಖ ಸಮಾರಂಭಗಳು ಯಶಸ್ಸನ್ನು ಕಂಡಿವೆ. ಹಕ್ಕು ಪತ್ರ ವಿತರಣೆ ಸಮಾರಂಭದ ಯಶಸ್ಸಿಗೂ ಪ್ರಾಮಾಣಿಕ ಯತ್ನ ಮಾಡಬೇಕಿದೆ. ಫಲಾನುಭವಿಗಳು ಹಾಗೂ ಗಣ್ಯರಿಗೆ ಊಟೋಪಚಾರದಲ್ಲಿ ಯಾವುದೇ ಕಾರಣಕ್ಕೂ ಕೊರತೆಯಾಗಬಾರದು.

    ನಮ್ಮ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನೂ ಪ್ರತಿ ಜಿಲ್ಲೆಗೂಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು. ಅವರು ಆಯಾ ಜಿ ಲ್ಲೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಫಲಾನುಭವಿಗಳು,ಬಸ್‌ಗಳ ಸಂಖ್ಯೆ,ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ,ನಿರ್ಗಮನ,ಆಯಾ ಜಿಲ್ಲೆವಾರು ಪಾರ್ಕಿಂಗ್ ಸ್ಥಳವನ್ನು ತಿಳಿಸಬೇಕು.
    ಫಲಾನುಭವಿಗಳನ್ನು ಕರೆದುಕೊಂಡು ಬಂದು ಸುರಕ್ಷಿತವಾಗಿ ಕರೆದುಕೊಂಡು ಹೋಗಲು 2 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚರಿಸಲಿವೆ.

    ವಿವಿ ಐಪಿಗಳಿಗೆ ಸಮಾರಂಭ ಸ್ಥಳದ ಸಮೀಪ ಹೆಲಿಪ್ಯಾಡ್ ನಿರ್ಮಾಣವಾಗಲಿದೆ. ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ,ಊಟ ದ ವ್ಯವಸ್ಥೆ ಅಚ್ಚುಕಟ್ಟಾಗಿರ ಬೇಕು. ವೈದ್ಯಕೀಯ ತಪಾಸಣೆ ಹಾಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಇರಬೇಕು.

    ಎಡಿಸಿ ಟಿ.ಜವರೇಗೌಡ ಅವರು ಮಾತನಾಡಿ,ಹಕ್ಕುಪತ್ರ ವಿತರಣೆ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಜಿಪಂ ಸಿಇಒ ಎಂ.ಎಸ್. ದಿವಾಕರ್,ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ಡಿಎಚ್‌ಒ ಡಾ.ರಂಗನಾಥ್,ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕ ಆನಂ ದ್ ಮತ್ತಿತರ ಅಧಿಕಾರಿಗಳಿದ್ದರು.

    ಕೋಟ್
    ಹಕ್ಕುಪತ್ರ ವಿತರಣಾ ಸಮಾರಂಭದ ಸಿದ್ಧತೆಗೆ ರಾಜ್ಯಸರ್ಕಾರ ಸೂಚಿಸಿದೆ. ಈ ಕಾರ‌್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ಆಗ ಮಿ ಸುವ ಕುರಿತಂತೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
    ಜಿಆರ್‌ಜೆ ದಿವ್ಯಾಪ್ರಭು,ಜಿಲ್ಲಾಧಿಕಾರಿ,ಚಿತ್ರದುರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts