More

  ವಾಹನ ಸವಾರರಿಗೆ ಕನ್ನಡ ಧ್ವಜ ವಿತರಣೆ

  ಶ್ರೀರಂಗಪಟ್ಟಣ: ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಪಟ್ಟಣದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

  ವೈದ್ಯ ದೊಡ್ಡಪಾಳ್ಯ ದೊಡ್ಡಿ ಗ್ರಾಮದ ಡಾ.ರಾಮಕೃಷ್ಣಯ್ಯ ಅವರಿಗೆ ಕಾವೇರಿ ವರಪುತ್ರ ಬಿರುದು ನೀಡಿ ಗೌರವಿಸಲಾಯಿತು. ವಾಹನ ಸವಾರರಿಗೆ ಕನ್ನಡ ಧ್ವಜಗಳನ್ನು ನೀಡಿ ಕನ್ನಡ ಪ್ರೇಮ ಮೆರೆದರು. ನಂತರ ಸಿಹಿ ಹಂಚಿದರು.

  ವೇದಿಕೆಯ ಅಧ್ಯಕ್ಷ ಬಿ.ಶಂಕರ್ ಬಾಬು, ಉಮೇಶ್ ಕುಮಾರ್, ಚಿಂದಗಿರಿಕೊಪ್ಪಲು ಸ್ವಾಮಿಗೌಡ, ಯುವ ಮುಖಂಡ ಬಿ.ಸಿ.ರವಿ, ರೈತ ಮುಖಂಡ ಮಹೇಂದ್ರ, ಮರವೇ ಕಾರ್ಯದರ್ಶಿ ಜಗದೀಶ್ ಗೌಡ, ಪದಾಧಿಕಾರಿಗಳಾದ ಜ್ಞಾನೇಶ್,ಅಂಕಶೆಟ್ಟಿ, ಕುಮಾರ್, ಛಾಯಾದೇವಿ, ಶಿವರಾಮು, ಅನಿತಾ, ಮಹದೇವಮ್ಮ, ಭಾಗ್ಯಮ್ಮ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts