More

    ರೈತರಿಗೆ ಪರಿಹಾರ ವಿತರಿಸಿ

    ಹಾನಗಲ್ಲ: ತಾಲೂಕಿನಾದ್ಯಂತ ರೈತರು ಬೆಳೆದ ಮುಂಗಾರು ಹಂಗಾಮಿನ ಗೋವಿನಜೋಳ, ಸೋಯಾಅವರೆ, ಶೇಂಗಾ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಕೂಡಲೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ತಾಲೂಕು ಕರ್ನಾಟಕ ಅಭಿವೃದ್ಧಿ ಜಾಗೃತಿ ವೇದಿಕೆ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

    ಮಳೆಯಿಂದ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಶೇ. 20ರಷ್ಟು ಫಸಲು ಕೂಡ ರೈತರ ಕೈಗೆ ಸಿಗದಂತಾಗಿದೆ. ಖಾಸಗಿ ಕಂಪನಿಗಳಿಂದ ಖರೀದಿಸಿದ್ದ ಕಳಪೆ ಸೋಯಾಅವರೆ ಬಿತ್ತಿ ನಷ್ಟ ಅನುಭವಿಸಿದ ರೈತರಿಗೆ ಈಗಾಗಲೇ ಘೊಷಿಸಿರುವ ಪರಿಹಾರವನ್ನು ಶೀಘ್ರ ವಿತರಿಸಬೇಕು. ಅತಿವೃಷ್ಟಿಯಿಂದ ಕೊಳೆ ರೋಗ ಬಂದು ಶುಂಠಿ ಬೆಳೆ ನಾಶವಾಗಿದೆ. ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ತಾಲೂಕಿನ ಕೂಡಲ, ಹರವಿ, ಹರನಗಿರಿ, ವರ್ದಿ, ಅಲ್ಲಾಪುರ, ಶೀಗಿಹಳ್ಳಿ, ಶಿಂಗಾಪುರ, ಕೋಡಿಯಲ್ಲಾಪುರ ಗ್ರಾಮಗಳಲ್ಲಿ ಮಳೆಯಿಂದ ಮನೆಗಳಿಗೆ ಅಪಾರ ಹಾನಿಯಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡದಿರುವುದರಿಂದ ಮನೆ ಕಳೆದುಕೊಂಡವರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೆ ಅಂಥ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡಬೇಕು. ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ನಿಯಮಾನುಸಾರ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಕರ್ನಾಟಕ ಅಭಿವೃದ್ಧಿ ಜಾಗೃತಿ ವೇದಿಕೆ ಅಧ್ಯಕ್ಷ ಎನ್.ಎಸ್. ಪಡೆಪ್ಪನವರ, ಜಿಲ್ಲಾಧ್ಯಕ್ಷ ಈಶ್ವರಯ್ಯ ಹಿರೇಮಠ, ತಾಲೂಕಾಧ್ಯಕ್ಷ ಶೇಖರಪ್ಪ ಜೀವಾಜಿ, ಉಪಾಧ್ಯಕ್ಷ ಶಿವಾನಂದ ಬೈಲಣ್ಣನವರ, ನಗರಾಧ್ಯಕ್ಷ ಎಸ್.ಬಿ. ಚನ್ನಗೌಡರ, ಮಲ್ಲನಗೌಡ ಪಾಟೀಲ, ಮಹದೇವಪ್ಪ ಹಾವೇರಿ, ಮಹೇಶ ದಾಮೋದರ, ಬಿ. ಮಾಲತೇಶ, ಸಿ.ಎನ್. ಮೇಗಳಮನಿ, ಶರಣಪ್ಪ ಕಾಡಪ್ಪನವರ, ಡಿ.ವೈ. ಪಾಟೀಲ, ಎಂ.ಎಚ್. ಹನಕನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts