More

    ನಿರಂತರ ಮಳೆಯಿಂದ ಕೃಷಿ ಕಾರ್ಯಕ್ಕೆ ಅಡ್ಡಿ

    ಅಕ್ಕಿಆಲೂರ: ಅಕ್ಕಿಆಲೂರ ಹಾಗೂ ಹೋಬಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಕೆರೆ- ಕಟ್ಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ.

    ಮಂಗಳವಾರ ಬೆಳಗಿನ ಜಾವದಿಂದ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯಿತು. ಅಕ್ಕಿಆಲೂರ ಸೇರಿ ಹೋಬಳಿ ವ್ಯಾಪ್ತಿಗೆ ಒಳಪಡುವ 16 ಗ್ರಾಪಂಗಳ 52 ಗ್ರಾಮಗಳ 20 ಸಾವಿರ ಹೆಕ್ಟೇರ್ ಪೈಕಿ ಬಹುತೇಕ ಪ್ರದೇಶ ಈಗಾಗಲೇ ಬಿತ್ತನೆಯಾಗಿದೆ. ನಿರಂತರ ಮಳೆಯಿಂದ ಹೊಲಗಳಲ್ಲಿ ಅಧಿಕ ನೀರು ಸಂಗ್ರಹವಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನನುಕೂಲವಾಗುತ್ತಿದೆ.

    ಧರ್ಮ, ವರದಾ ನದಿ ಪಾತ್ರದಲ್ಲಿರುವ ಸಮೀಪದ ಸುರಳೇಶ್ವರ, ಹಾವಣಗಿ, ಮಲಗುಂದ, ಹಿರೇಹುಲ್ಲಾಳ, ಅರೇ ಕಲ್ಮಾಪುರ, ಬಾಳಂಬೀಡ ಸುತ್ತಲಿನ ಗ್ರಾಮದ ರೈತರ ಹೊಲದಲ್ಲಿ ಹೆಚ್ಚು ನೀರು ನಿಂತು ಕೃಷಿ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಮಳೆ ಬಿಡುವು ಕೊಟ್ಟರೆ ಮುಂದಿನ ಕೆಲಸಕ್ಕೆ ಅನುಕೂಲ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಕೆರೆಕಟ್ಟೆಗಳಿಗೆ ಹರಿದು ಬರುತ್ತಿರುವ ಮಳೆ ನೀರು: ಶಿವಮೊಗ್ಗ ಜಿಲ್ಲೆಯಿಂದ ಸಮೀಪದ ಹೊಂಕಣ ಗ್ರಾಮದ ಮೂಲಕ ಹಾನಗಲ್ಲ ತಾಲೂಕು ಪ್ರವೇಶಿಸುವ ವರದಾ ನದಿ ಮಂಗಳವಾರದಿಂದ ಹರಿಯಲು ಆರಂಭಿಸಿದೆ. ಸಮೀಪದ ಅರೇಲಕ್ಮಾಪುರ, ಬಾಳಂಬೀಡ ಗ್ರಾಮಸ್ಥರು ಗಂಗಾಪೂಜೆ ನೆರವೇರಿಸಿದ್ದಾರೆ. ವರದಾ ನದಿಯಲ್ಲಿ ನೀರಿನ ಹರಿವು ಮತ್ತು ನಿರಂತರ ಮಳೆಯಿಂದ ಈಗಾಗಲೇ ತಾಲೂಕಿನಲ್ಲಿ ಕೆರೆ- ಕಟ್ಟೆಗಳಲ್ಲಿ ನೀರು ಸಂಗ್ರಹವಾಗಲು ಆರಂಭವಾಗಿದೆ.

    ನಿರಂತರ ಮಳೆಯೂ ಸುರಿಯುತ್ತಿದೆ. ವರದಾ ನದಿ ಪ್ರಾತದಲ್ಲಿರುವ ನಮ್ಮ ಹೊಲಗಳಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ಮಳೆ ಬಿಡುವು ಕೊಟ್ಟರೆ ಮುಂದಿನ ಕೃಷಿ ಕಾರ್ಯಕ್ಕೆ ಅನುಕೂಲವಾಗುತ್ತದೆ.

    | ಸಚೀನ ರಾಮಣ್ಣನವರ ಅರೇಲ್ಮಾಪುರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts