More

    ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಹಡಪದ ಸಮಾಜಕ್ಕೆ ಅಗೌರವ

    ವಿಜಯಪುರ: ಟಿಇಟಿ ಪರೀಕ್ಷೆ ಪತ್ರಿಕೆಯಲ್ಲಿ ಕ್ಷೌರಿಕ ವೃತ್ತಿ ಕುರಿತು ನಿಷೇಧಿತ ಪದವನ್ನು ಬಳಕೆ ಮಾಡಿರುವುದನ್ನು ಖಂಡಿಸಿ ಹಡಪದ ಸಮಾಜದ ಮುಖಂಡರು ಹಾಗೂ ಬಸವ ಪ್ರಿಯ ಹಡಪದ ಅಪ್ಪಣ್ಣನವರ ವಿವಿದೊದ್ದೇಶಗಳ ಸಂಘದ ವತಿಯಿಂದ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ದಯಾನಂದ ಸಿ. ಹಡಪದ ಮಾತನಾಡಿ, ಟಿಇಟಿ ಪತ್ರಿಕೆಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಯೊಂದರಲ್ಲಿ `ಹಜಾಮ’ ಎನ್ನುವ ಪದವನ್ನು ಬಳಕೆ ಮಾಡಲಾಗಿದೆ. ೨೦೧೬ ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ೨೦೦೫ರ ಪ್ರಕಾರ ಈ ಪದ ಬಳಕೆಯನ್ನು ನಿಷೇಧ ಮಾಡಿದ್ದು, ಆದೇಶವನ್ನು ಗಾಳಿಗೆ ತೂರಿದ ಶಿಕ್ಷಣ ಇಲಾಖೆಯು ಹಡಪದ ಸಮಾಜಕ್ಕೆ ಅಗೌರವ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮ ಸಮಾಜದವರು ಶಾಂತ ಹಾಗೂ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಎಲ್ಲ ಸಮಾಜವನ್ನು ಗೌರವದಿಂದ ಕಾಣಬೇಕು. ಶಿಕ್ಷಣ ಇಲಾಖೆಯು ನಿಷೇಧಿತ ಪದವನ್ನು ಬಳಸಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದೆ. ಶಿಕ್ಷಣ ಇಲಾಖೆಯು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯ ಪ್ರಶ್ನೆ ಪತ್ರಿಕೆ ತಯಾರಿಸಿದ ಅಽಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಇಲ್ಲವಾದಲ್ಲಿ ನಮ್ಮ ಹಡಪದ ಸಮಾಜದ ವತಿಯಿಂದ ಇಡೀ ರಾಜ್ಯಾದ್ಯಂತ ಶಿಕ್ಷಣ ಇಲಾಖೆಯ ವಿರುದ್ಧ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ. ಯಾವುದೇ ಒಂದು ಸಮಾಜಕ್ಕೆ ಕುರಿತು ಇಂತಹ ನಿಷೇಧಿತ ಶಬ್ದಗಳನ್ನು ಬಳಕೆ ಮಾಡುವುದರಿಂದ ಸಮಾಜಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಅರಿಯಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟಕ್ಕೆ ತಾವೇ ಎಡೆ ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ಅರಿಯಬೇಕೆಂದರು.

    ಸಂಘದ ಪ್ರಧಾನ ಕಾರ್ಯದರ್ಶಿ ಧರೆಪ್ಪ ಹಡಪದ, ಸದಸ್ಯರಾದ ಓಂಕಾರ ನಾವಿ, ಎನ್.ಎ. ನಾವಿ, ಈರಣ್ಣ ಹಡಪದ, ರಮೇಶ ಹಡಪದ, ಪ್ರಕಾಶ ಹಡಪದ, ಬಸವರಾಜ ಹಡಪದ, ಬಾಬು ಹಡಪದ, ರಾಜು ಹಡಪದ, ಸುಭಾಷ ಹಡಪದ, ಸಿದ್ದು ಹಡಪದ, ಶರಣಬಸು ನಾವಿ, ಬಸವರಾಜ ಹಡಪದ, ಶಿವಾನಂದ ಹಡಪದ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts