More

    ಅನರ್ಹರಿಗೆ ಲಾಭ ಮಾಡಿದರೆ ಕ್ರಮ

    ಬೆಳಗಾವಿ: ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹರನ್ನು ಆಯ್ಕೆ ಮಾಡಬೇಕು. ಅನರ್ಹರ ಆಯ್ಕೆ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2019-20ನೇ ಸಾಲಿನ ವಿವಿಧ ಯೋಜನೆಗಳ ಅನುದಾನ ಬಳಕೆ ಮತ್ತು ಫಲಾನುಭವಿಗಳ ಆಯ್ಕೆ ಕುರಿತು ಸಮಿತಿಗೆ ವರದಿ ಸಲ್ಲಿಸಬೇಕು. 2020-21ನೇ ಸಾಲಿನ ಅವಧಿಯ ವಿವಿಧ ಯೋಜನೆಗಳಿಗೆ ಅರ್ಹರನ್ನು ಆಯ್ಕೆ ಮಾಡಬೇಕು ಎಂದರು.

    ಕೋವಿಡ್ ಕಾರಣದಿಂದ ಸ್ಥಾಯಿ ಸಮಿತಿಗಳಿಗೆ ಬರುತ್ತಿದ್ದ ಅನುದಾನದಲ್ಲಿ ಶೇ.50 ಕಡಿತವಾಗಿರುವುದರಿಂದ ಲಭ್ಯವಿರುವ ಅನುದಾನ ಸದುಪಯೋಗ ಪಡಿಸಿಕೊಳ್ಳುವತ್ತ ಅಧಿಕಾರಿಗಳು ಗಮನಹರಿಸಬೇಕು. ಪ್ರತಿವರ್ಷ 1 ಕೋಟಿ ರೂ. ಅನುದಾನ ಬರುತ್ತಿತ್ತು. ಈ ವರ್ಷ ಕೋವಿಡ್ ಕಾರಣದಿಂದ ಅನುದಾನ 50 ಲಕ್ಷ ರೂ.ಗೆ ಕಡಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಅನುದಾನ ಬಳಕೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಇರಬೇಕು ಎಂದರು.

    ಗ್ರಾಮೀಣ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಇರುವ ಸಾಲ ಯೋಜನೆ ಇದ್ದೂ ಇಲ್ಲದಂತಾಗಿದೆ. ಆರ್ಥಿಕವಾಗಿ ಬಡವರಿರುವ ಕಂಬಾರ, ಕುಂಬಾರ, ಬಡಿಗ ಸೇರಿ ವಿವಿಧ ಕುಶಲಕರ್ಮಿಗಳಿಗೆ ಬ್ಯಾಂಕ್‌ಗಳು ಸಾಲ ವಿತರಣೆ ಮಾಡುವುದು ಅಪರೂಪ. ಇಂತಹ ಪರಿಸ್ಥಿತಿಯಲ್ಲಿ ಸಾಲದ ಮೇಲೆ ಸಬ್ಸಿಡಿ ನೀಡುವ ಯೋಜನೆ ಯಾರನ್ನೂ ತಲುಪದು. ಸಾಲ ಸೌಲಭ್ಯ ನೇರವಾಗಿ ಅವರಿಗೆ ತಲುಪುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮಿತಿ ಸದಸ್ಯೆ ಲಾವಣ್ಯಾ ಶಿಲೇದಾರ ಆಗ್ರಹಿಸಿದರು.

    ಸಮಿತಿ ಸದಸ್ಯರಾದ ಮಾಧುರಿ ಶಿಂಧೆ, ಮೀನಾಕ್ಷಿ ಜೋಡಟ್ಟಿ, ಅಜಿತ ದೇಸಾಯಿ, ನಿಂಗಪ್ಪ ಹರಕೇರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಇತರರು ಇದ್ದರು.

    ರೈತರಿಗೆ ನಿಯಮದಂತೆ ಕೃಷಿ ಪರಿಕರ ವಿತರಿಸಿ ಕೃಷಿ ಇಲಾಖೆಯಿಂದ ವಿತರಣೆಯಾಗುತ್ತಿರುವ ತಾಡಪತ್ರಿಗಳು ಕಳಪೆ ಇರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ನಿಯಮಾವಳಿ ಪ್ರಕಾರ ಕೃಷಿ ಪರಿಕರ ವಿತರಣೆಯಾಗಬೇಕು. ಬೆಳೆಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ.

    ಈ ಕುರಿತು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೃಷಿ ಕಚೇರಿಗಳ ರಿಪೇರಿ ಕೆಲಸಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕೇ ಹೊರತು ಶಿಾರಸ್ಸಿಗೆ ಅವಕಾಶ ನೀಡಬಾರದು ಎಂದು ಸಮಿತಿ ಅಧ್ಯಕ್ಷ ನಿಂಗಪ್ಪ ಪಕಾಂಡಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts