More

    ಟೀಮ್​ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ಬೋಲ್ಡ್​ ಆದ ಬಾಲಿವುಡ್​ ಬೆಡಗಿ ದಿಶಾ!

    ಮುಂಬೈ: ಬಾಲಿವುಡ್​ ಹಾಟ್​ ಆ್ಯಂಡ್​ ಬ್ಯೂಟಿಫುಲ್​ ಬೆಡಗಿ ದಿಶಾ ಪಟಾನಿಯವರು ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್​ ಸ್ಕಿಲ್​ಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

    ಒಂದು ವೇಳೆ ಪಂದ್ಯ ಗೆಲ್ಲಿಸಬಹುದಾದಂತಹ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವಾದರೆ, ನಾನು ಬುಮ್ರಾರನ್ನು ಆಯ್ಕೆ ಮಾಡುತ್ತೇನೆ. ನಾವು ಹೊಂದಿರುವ ಆಟಗಾರರಲ್ಲಿ ಬುಮ್ರಾ ಓರ್ವ ಉತ್ತಮ ಆಟಗಾರ. ಫೆಬ್ರವರಿ 2ರಂದು ನ್ಯೂಜಿಲೆಂಡ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಬುಮ್ರಾ, ಕಿವೀಸ್​ ಆಟಗಾರರನ್ನು ಬಗ್ಗುಬಡಿಯುವುದು ನಮ್ಮೆಲ್ಲರ ಹೆಮ್ಮೆಯ ಕ್ಷಣವಾಗಿರಲಿದೆ ಎಂದು ದಿಶಾ ಹೇಳಿದ್ದಾರೆ.

    ಸಿಕ್ಕಾಪಟ್ಟೆ ಹೊಗಳುವುದನ್ನು ನೋಡಿ ಇದೇನಪ್ಪಾ ದಿಶಾ ಏನಾದರೂ ಬುಮ್ರಾ ಪ್ರೀತಿಯ ಬಲೆಗೆ ಬಿದ್ದರಾ ಎಂದು ಭಾವಿಸಬೇಡಿ. ಅಂದಹಾಗೆ ತಮ್ಮ ಮುಂದಿನ “ಮಲಾಂಗ್​” ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕ್ರಿಕೆಟ್​ ಬಗೆಗಿನ ತಮ್ಮ ಆಸಕ್ತಿಯನ್ನು ದಿಶಾ ಹೊರಹಾಕಿದ್ದಾರಷ್ಟೇ.

    ಮಲಾಂಗ್ ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಅನಿಲ್​ ಕಪೂರ್​ ಕೂಡ ಇದೇ ಕಾರ್ಯಕ್ರಮದಲ್ಲಿ ಮಾತನಾಡಿ ವಿರಾಟ್​ ಕೊಹ್ಲಿ ಅವರನ್ನು ಮನಸಾರೆ ಕೊಂಡಾಡಿದ್ದಾರೆ. ವಿರಾಟ್​ ಕೊಹ್ಲಿ ನಮ್ಮೆಲ್ಲರ ಬಾಸ್​. ಯಾರೇ ಎದುರಾಳಿಯಾಗಿರಲಿ ಕ್ರಿಕೆಟ್​ ಕಡೆಗಿನ ಅವರ ತುಡಿತ ಎಲ್ಲರನ್ನು ಮನಸೂರೆಗೊಳಿಸುತ್ತದೆ ಎಂದಿದ್ದಾರೆ.

    ಇನ್ನೊಬ್ಬ ನಟ ಕುನಾಲ್​ ಕೆಮು ರೋಹಿತ್​ ಶರ್ಮರ ಬ್ಯಾಟಿಂಗ್​ ಸ್ಕಿಲ್​ ಬಗ್ಗೆ ಮೆಚ್ಚುಗೆ ಸೂಚಿಸಿ​​, ಟೀಮ್​ ಇಂಡಿಯಾದ ಹಿಟ್​ ಮ್ಯಾನ್​ ಎಂದು ಪ್ರಶಂಸಿಸಿದ್ದಾರೆ. ಕೊನೆಯಲ್ಲಿ ನಟ ಆದಿತ್ಯ ರಾಯ್​, ಕೆ.ಎಲ್​.ರಾಹುಲ್​ ಅವರ ಆಲ್​ರೌಂಡರ್​ ಆಟಕ್ಕೆ ಫಿದಾ ಆಗಿರುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts