More

    ಪ್ರಿಯಾಂಕಾ ಚೋಪ್ರಾ ಎದೆಗಾರಿಕೆಯನ್ನು ಟ್ರೋಲ್​ ಮಾಡಿದವರಿಗೆ ದಿಶಾ ಪಟಾನಿ ಕೊಟ್ಟ ತಿರುಗೇಟು ಹೀಗಿದೆ….

    ಮುಂಬೈ: ಕಳೆದ ವಾರ ನಡೆದ ಗ್ರ್ಯಾಮಿ ಅವಾರ್ಡ್​​ ಕಾರ್ಯಕ್ರಮದಲ್ಲಿ ಎದೆಗಾರಿಕೆ ಪ್ರದರ್ಶಿಸಿ ನೆಟ್ಟಿಗರಿಂದ ಟ್ರೋಲ್​ಗೆ ಗುರಿಯಾಗಿದ್ದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಪರ ದಿಶಾ ಪಟಾನಿ ಬ್ಯಾಟ್​ ಬೀಸಿದ್ದಾರೆ.

    ವಿವಾದದ ಬಗ್ಗೆ ದಿಶಾ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದರು. ಅಲ್ಲದೆ, ತನ್ನ ಫೋಟೋ ಬಗ್ಗೆ ಬರುವ ಕೆಟ್ಟ ಕಮೆಂಟ್​ಗಳನ್ನು ಪದೇಪದೆ ನಿಷ್ಕ್ರಿಯಗೊಳಿಸುವ ಬಗ್ಗೆಯೂ ಹೇಳಿದರು. ಬ್ರ್ಯಾಂಡ್ಸ್​ ಏನು ಡಿಮ್ಯಾಂಡ್​ ಮಾಡುತ್ತದೆಯೋ ಅದನ್ನು ನಾನು ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

    ಇದೇ ವೇಳೆ ಪ್ರಿಯಾಂಕಾ ಟ್ರೋಲ್​ ಬಗ್ಗೆ ಮಾತನಾಡಿ, ಅವರು ಸುಂದರವಾಗಿ ಕಾಣುತ್ತಾರೆ ಎಂದರು. ಟ್ರೋಲಿಗರನ್ನು ಉದ್ದೇಶಿಸಿ ಅವರ ಮನಸ್ಥಿತಿಯೇ ಕೆಟ್ಟದಾಗಿದೆ ಎಂದು ಜರಿದರು. ಮುಂದುವರಿದು, ಈ ರೀತಿಯ ಬಟ್ಟೆಗಳನ್ನು ನಮ್ಮ ದೇಶದವರೇ ಯಾರಾದರೂ ಧರಿಸಿದರೆ ಅವರನ್ನು ಟ್ರೋಲ್​ ಮಾಡುತ್ತಾರೆ. ಅದೇ ಹೊರಗಿನವರು ಯಾರಾದರೂ ತೊಟ್ಟರೆ ಅವರು ಎಷ್ಟು ಸುಂದರವಾಗಿದ್ದಾರೆ ನೋಡಿ ಎನ್ನುತ್ತಾರೆ. ಇದಕ್ಕೆಲ್ಲಾ ನಾವು ತಲೆ ಕೆಡೆಸಿಕೊಳ್ಳಬಾರದು. ಇಂತಹದನ್ನು ನಿರ್ಲಕ್ಷಿಸಿ ಮುನ್ನೆಡೆಯಬೇಕೆಂದರು.

    ಈ ಮುಂಚೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೂಡ ಮಗಳ ಪರ ಬ್ಯಾಟ್​ ಬೀಸಿದ್ದರು. ಟೀಕೆಗಳು ಪ್ರಿಯಾಂಕಾಳನ್ನು ಮತ್ತಷ್ಟು ಬಲವಾಗಿಸುತ್ತದೆ. ಎದೆಗಾರಿಕೆ ಪ್ರದರ್ಶಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಮಗಳ ಪರವಾಗಿ ಧ್ವನಿ ಎತ್ತಿದ್ದರು.

    ಅಂದಹಾಗೆ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ವಿನೂತ ಉಡುಪು ಧರಿಸಿ ಕಾಣಿಸಿಕೊಂಡಿದ್ದರು. ಕತ್ತಿನಿಂದ ಜಾರಿ ಅರ್ಧ ಎದೆಯಲ್ಲದೆ, ಹೊಕ್ಕುಳ ಕಾಣಿಸುವ ರೀತಿ ಧರಿಸಿದ್ದ ಗೌನ್​ ಎಲ್ಲರ ಹುಬ್ಬೇರಿಸಿತ್ತು. ನಂತರ ಇದು ಟ್ರೋಲಿಗರಿಗೆ ದಾಳವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಹರಿದುಬಂದಿತ್ತು. ಆದರೂ ಪ್ರಿಯಾಂಕಾ ಪರ ಅನೇಕರು ಬ್ಯಾಟ್​ ಬೀಡುವ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts