More

    ನಾರಗೊಂಡ ಶೈಕ್ಷಣಿಕ ಸೇವೆ ಶ್ಲಾಘನೀಯ

    ಹಾರೂಗೇರಿ: ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್.ಎಂ.ನಾರಗೊಂಡ ಇಂಟರ್‌ನ್ಯಾಷನಲ್ (ಸಿ.ಬಿ.ಎಸ್.ಸಿ.) ಸ್ಕೂಲ್ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ತೆರೆಯುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾಗಿರುವ ವಿವೇಕ ನಾರಗೊಂಡ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಸಮೀಪದ ಹಾರೂಗೇರಿ ಕ್ರಾಸ್ ಸಮೀಪದ ಮಲ್ಲಿಕಾರ್ಜುನ ೌಂಡೇಷನ್, ಶೇಗುಣಸಿಯ ಎಸ್.ಎಂ.ನಾರಗೊಂಡ ಇಂಟರ್‌ನ್ಯಾಷನಲ್ ಸ್ಕೂಲ್ (ಸಿ.ಬಿ.ಎಸ್.ಸಿ.) ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚಿಗುರು 5ನೇ ಆವೃತ್ತಿಯ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಾನ್ನಿಧ್ಯ ವಹಿಸಿದ್ದ ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ಭಾರತ ಸಂಸ್ಕಾರ, ಸಂಸ್ಕೃತಿ ತವರೂರಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸಂಸ್ಥಾಪಕ ಶ್ರೀಶೈಲ ನಾರಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

    ಸರಿಗಮಪ ಮತ್ತು ಕನ್ನಡ ಕೋಗಿಲೆ ಖ್ಯಾತಿ ಗಾಯಕರಿಂದ ಸಂಗೀತ ರಸಮಂಜರಿ ಹಾಗೂ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.

    ಜಿನ್ನಪ್ಪ ಅಸ್ಕಿ, ಎನ್.ಎಸ್.ಚೌಗಲಾ, ಸಿದ್ದಪ್ಪ ಹಾಡಕಾರ, ತವನಪ್ಪ ಬದನಿಕಾಯಿ, ರಾಮಣ್ಣ ಗಸ್ತಿ, ಬಾಬು ಹಳ್ಳೂರ, ಶಿವರಾಯ ಯಲಡಗಿ, ತಮ್ಮಣ್ಣಪ್ಪ ತೇಲಿ, ಡಾ.ಗಿರೀಶ ನಾರಗೊಂಡ, ಚಿದಾನಂದ ನಾರಗೊಂಡ, ಡಾ.ಮೃತ್ಯುಂಜಯ ನಾರಗೊಂಡ, ಡಾ.ವಿಶ್ವನಾಥ ನಾರಗೊಂಡ, ಪ್ರಾಚಾರ್ಯ ಎಂ.ಎಸ್.ಹಿರೇಮಠ, ಸಂಸ್ಥೆ ಅಧ್ಯಕ್ಷ ವಿವೇಕ ನಾರಗೊಂಡ ಸ್ವಾಗತಿಸಿದರು. ಮಹಾಂತೇಶ ಮುಗಳಖೋಡ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts