More

    ಶಿಸ್ತು, ಸಂಸ್ಕಾರ ಬೆಳೆಸಿದ ತ್ರಿವಿಧ ದಾಸೋಹಿ

    ಸಿರಿಗೇರಿ: ಸಾಮಾಜಿಕ ಜೀವನದಲ್ಲಿ ಅನೇಕ ಸಾಧು ಸಂತರು ಮಹತ್ತರ ಸಾಧನೆ ಮಾಡಿ ಜನರ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಮುಖ್ಯಶಿಕ್ಷಕ ಗೋವಿಂದರಾಜ್ ಹೇಳಿದರು.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಬ್ಲುಎಸ್ ನಲ್ಲಿ ಸೋಮವಾರ ಏರ್ಪಡಿಸಿದ್ದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ. ಶಿವಕುಮಾರ ಶ್ರೀಗಳ 117 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾವುದೇ ನಿರೀಕ್ಷೆಗಳಿಲ್ಲದೆ ಶಿವಕುಮಾರ ಶ್ರೀಗಳು ಬಡ ಮಕ್ಕಳಿಗೆ ಆಶ್ರಯ ಒದಗಿಸುವುದರೊಂದಿಗೆ ಅನ್ನ, ಅಕ್ಷರ ದಾಸೋಹ ನೀಡಿದರು. ಅಲ್ಲದೆ ಮಕ್ಕಳಲ್ಲಿ ಶಿಸ್ತು, ಸಂಯಮ, ಸಂಸ್ಕಾರ ಬೆಳೆಸಿದರು. ನಾವು ಕೂಡ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು. ಶಿಕ್ಷಕ ಜಿ.ಕೆ.ಗುರುಸ್ವಾಮಿ, ಸ್ನೇಹ ಬಳಗದ ಸದಸ್ಯರಾದ ಭಜಂತ್ರಿ ರಮೇಶ್, ಹನುಮೇಶ್ ಮಾತನಾಡಿದರು. ಸ್ನೇಹ ಬಳಗದ ಸದಸ್ಯರಾದ ಖಾಜಾಪೀರ್, ಜನಾರ್ದನ ವಿಶ್ವಕರ್ಮ, ಮೆಡಿಕಲ್ ಚಾಂದ್‌ಬಾಷಾ, ಪಂಪ, ಟೈಲರ್ ಕುಂಬಾರ್ ಬಸವರಾಜ್ , ಇಡ್ಲಿ ಬಂಡಿ ವೀರೇಶ್, ಶಿಕ್ಷಕರಾದ ಬಸವರಾಜ್, ಗಂಗಾಧರ್ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts