More

    ಮಕ್ಕಳಿಗೆ ಶಿಸ್ತು, ಸಂಸ್ಕಾರ ಕೊಡಿ

    ಹುಬ್ಬಳ್ಳಿ: ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸುವುದರ ಜತೆಗೆ ಸಂಸ್ಕಾರ, ಶಿಸ್ತು ಕೂಡ ಕಲಿಸಬೇಕು. ಇದು ಬರೀ ಶಿಕ್ಷಕರಿಗಷ್ಟೇ ಮೀಸಲಲ್ಲ. ತಂದೆ-ತಾಯಿ ಮೇಲೆ ಜವಾಬ್ದಾರಿಯೂ ಇದೆ ಎಂದು ಉದ್ಯಮಿ ರಮೇಶ ಮಹಾದೇವಪ್ಪನವರ ಹೇಳಿದರು.
    ಇಲ್ಲಿಯ ಉಣಕಲ್‌ನ ಸಿದ್ದಕಲ್ಯಾಣ ನಗರದ ಜ್ಞಾನದ ಶಿಕ್ಷಣ ಸಂಸ್ಥೆಯ ತಕ್ಷ ಪ್ರಿ-ನರ್ಸರಿ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಯಶಸ್ವಿ’ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ದೇಶದ ಭವಿಷ್ಯ ನಿಂತಿರುವುದು ಮಕ್ಕಳ ಮೇಲೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ತಯಾರುಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
    ಡಾ. ವೀರೇಶ ಕಲ್ಯಾಣಮಠ ಮಾತನಾಡಿ, ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ಕೊಡಬೇಕು. ಈ ನಿಟ್ಟಿನಲ್ಲಿ ತಕ್ಞ ಶಾಲೆ ಕಾರ್ಯತತ್ಪರವಾಗಿದೆ. ಚಿಕ್ಕಂದಿನಿಂದಲೇ ಒಳ್ಳೆಯ ಶಿಕ್ಷಣದ ಜತೆಗೆ ಸಂಸ್ಕಾರ, ಶಿಸ್ತು ನೀಡುತ್ತಿರುವುದು ನೋಡಿ ಖುಷಿಯಾಗುತ್ತಿದೆ ಎಂದರು.
    ವಿವಿಧ ಹಾಡುಗಳಿಗೆ ಮಕ್ಕಳು ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು.
    ಕಲಾವಿದ ಅಶೋಕ ಬೆಳ್ಳಿಗಟ್ಟಿ, ಸಂಸ್ಥೆಯ ಚೇರ್ಮನ್ ಮನ್ಮೀತ್ ಸಿಂಗ್ ಕೊಹ್ಲಿ, ಕಾರ್ಯದರ್ಶಿ ಸಾವಿತ್ರಿ ಕೋರಿಕೊಪ್ಪ, ಸಂಚಾಲಕಿ ಶ್ರೀದೇವಿ ಸುಗಂಧಿ, ಮುಖ್ಯಶಿಕ್ಷಕಿ ಅಪರ್ಣಾ ಕೊಹ್ಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts