More

    ಸಿಇಟಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಪುನರಾವರ್ತಿತ ವಿದ್ಯಾರ್ಥಿ-ಪಾಲಕರ ಆಕ್ರೋಶ

    ಬೆಂಗಳೂರು: ಕಾಮನ್​ ಎಂಟ್ರೆನ್ಸ್​ ಟೆಸ್ಟ್​(ಸಿಇಟಿ) ಫಲಿತಾಂಶದ ಬೆನ್ನಿಗೇ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಇಟಿ ಫಲಿತಾಂಶದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಎದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರತಿ ವರ್ಷ ಸಿಇಟಿ ಅಂಕಗಳ ಜತೆಗೆ ಪಿಯು ಅಂಕಗಳನ್ನು ಸೇರಿಸಿ ಫಲಿತಾಂಶ ನೀಡಲಾಗುತ್ತಿತ್ತು. ಆದರೆ ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪಿಯು ಪರೀಕ್ಷೆ ರದ್ದಾಗಿದ್ದು, ಸಿಇಟಿ ಪರೀಕ್ಷೆಯ ಅಂಕವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಅದರಂತೆ ಈ ಸಲ ಪರೀಕ್ಷೆ ಬರೆದ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿಗಣನೆಗೆ ತೆಗೆದುಕೊಂಡು ರಿಸಲ್ಟ್ ನೀಡಲಾಗಿದೆ. ಇನ್ನುಳಿದಂತೆ ಈ ಬಾರಿಯ ವಿದ್ಯಾರ್ಥಿಗಳಿಗೆ ಪಿಯು ಮತ್ತು ಸಿಇಟಿ ಮಾರ್ಕ್ಸ್ ಸೇರಿಸಿ ಕೆಇಎ ಫಲಿತಾಂಶ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಬಿಎಸ್​ಇ ಹಾಗೂ ಪಿಯು ವಿದ್ಯಾರ್ಥಿಗಳ ಎರಡು ಅಂಕ ಗಣನೆಗೆ ತೆಗೆದುಕೊಂಡಿರುವ ಕೆಇಎ, ರಿಪೀಟರ್ ವಿದ್ಯಾರ್ಥಿಗಳ ಸಿಇಟಿ ಅಂಕ ಮಾತ್ರ ಗಣನೆಗೆ ತೆಗೆದುಕೊಂಡಿದೆ. ಹೀಗಾಗಿ ಕಳೆದ ಬಾರಿ 90 ಅಂಕ ಪಡೆದವರಿಗೂ 15000 ಒಳಗೆ ರ‌್ಯಾಂಕಿಂಗ್ ದೊರೆತಿತ್ತು. ಆದರೆ ಈ ಬಾರಿ 98 ಅಂಕ ಪಡೆದಿದ್ದರೂ 1 ಲಕ್ಷದ ಮೇಲೆ ರ‌್ಯಾಂಕಿಂಗ್ ದೊರೆತಿದೆ. ಕೆಇಎ ಮುಂದೆ ಜಮಾವಣೆಗೊಂಡಿರುವ ಪೋಷಕರು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.

    ಸಿಇಟಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಪುನರಾವರ್ತಿತ ವಿದ್ಯಾರ್ಥಿ-ಪಾಲಕರ ಆಕ್ರೋಶ

    ಹಾಗೆ ಮಾಡಿದರೆ ಇಡೀ ವ್ಯವಸ್ಥೆ ಗೊಂದಲ..

    ಯಾವುದೇ ವಿದ್ಯಾರ್ಥಿಗಳಿಗೆ ನಾವು ಅನ್ಯಾಯ ಮಾಡಿಲ್ಲ. 2020ರಲ್ಲಿ ಕರೊನಾ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ನಡೆದಿರಲಿಲ್ಲ, ಹೀಗಾಗಿ ಸಿಇಟಿ ಅಂಕದ ಆಧಾರದಲ್ಲಿ ರ‌್ಯಾಂಕ್​ ನೀಡಲಾಗಿತ್ತು. ಆದರೆ ಈ ಬಾರಿ ಪಿಯುಸಿ ಪರೀಕ್ಷೆ ನಡೆದಿತ್ತು, ಹೀಗಾಗಿ ಸಿಇಟಿ ಶೇ. 50 ಅಂಕ ಮತ್ತು ಪಿಯುಸಿ ಶೇ. 50 ಪಡೆಯಲಾಗಿದೆ. 20200ರ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ 2020ರ ನಿಯಮದಂತೆ ಸಿಇಟಿ ಅಂಕ ಮಾತ್ರ ಪಡೆದು ರಾಂಕ್ ಪಡೆಯಲಾಗಿದೆ. ಪ್ರತಿ ವರ್ಷ ರಿಪೀಟರ್ಸ್ ಆಗಿ 2-3 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ ಈ ಬಾರಿ 23 ಸಾವಿರ ವಿದ್ಯಾರ್ಥಿಗಳು ಪುನಃ ಪರೀಕ್ಷೆ ಬರೆದಿದ್ದಾರೆ. ಅವರಿಗೆ ಪಿಯುಸಿ ಅಂಕ ಪಡೆದು ರಾಂಕ್ ಕೊಟ್ಟರೆ ಇಡೀ ವ್ಯವಸ್ಥೆ ಗೊಂದಲ ಆಗುತ್ತದೆ. 2020ರ ವಿದ್ಯಾರ್ಥಿಗಳಿಗೆ ಯಾವ ನಿಯಮ ಪಾಲನೆ ಮಾಡಲಾಗಿದೆಯೋ ಅದೇ ನಿಯಮ ರಿಪೀಟರ್ಸ್​​ಗೆ ಪಾಲನೆ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಸ್ಪಷ್ಟನೆ ನೀಡಿದ್ದಾರೆ.

    ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ದಂಪತಿಗೆ 3 ವರ್ಷ ಜೈಲು; 70.25 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts