More

    ಬಜೆಟ್ ಮಂಡನೆಗೂ ಮೊದಲೇ ಅಪಸ್ವರ

    ಮಳವಳ್ಳಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ಪುರಸಭೆ ಆಡಳಿತಾಧಿಕಾರಿ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ 2024-25ನೇ ಸಾಲಿನ ಆಯವ್ಯಯ ಸಭೆಯಲ್ಲಿ ಒಟ್ಟು 26.80 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 26.05 ಕೋಟಿ ರೂ. ಖರ್ಚನ್ನು ಹೊರತುಪಡಿಸಿ ಉಳಿದಂತೆ 75 ಲಕ್ಷ ರೂ. ಉಳಿತಾಯ ಬಜೆಡ್ ಮಂಡಿಸಲಾಯಿತು.

    ಬಜೆಟ್ ಸಭೆ ಪ್ರಾರಂಭವಾಗಿ ಪ್ರತಿ ಓದುವ ವೇಳೆ ಸದಸ್ಯ ಸಿದ್ದರಾಜು ಮಾತನಾಡಿ, ಸದಸ್ಯರಿಗೆ ಬಜೆಟ್‌ಗೆ ಸಂಬಂಧಿಸಿದ ಹೈಲೈಟ್ ಪ್ರತಿಯನ್ನಷ್ಟೇ ನೀಡಿದ್ದೀರಿ. ನೀವು ಓದುವುದನ್ನು ಕೇಳಿಸಿಕೊಂಡು ಕೂತಿರಬೇಕೇ? ಎಂದು ಕಿಡಿಕಾರಿದರು.

    ಪೂರಕ ಮಾಹಿತಿ ಇರುವ ಪ್ರತಿ ನೀಡುವವರೆಗೂ ಬಜೆಟ್ ಮಂಡಿಸಬಾರದೆಂದು ಪಟ್ಟುಹಿಡಿದರು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಾಹಿತಿ ಉಳ್ಳ ಪ್ರತಿಗಳನ್ನು ಜೆರಾಕ್ಸ್ ಮಾಡಿಸಿಕೊಂಡು ಬಂದು ಸದಸ್ಯರಿಗೆ ವಿತರಿಸಿದರು. ನಂತರ ಸಭೆ ಮುಂದುವರಿಯಿತು.

    ಸದಸ್ಯ ಶಿವಸ್ವಾಮಿ ಶವ ಸಾಗಣೆ ವಾಹನ ಖರೀದಿಸಿ ಶವಸಂಸ್ಕಾರಕ್ಕೆ ಪಟ್ಟಣದ ಜನತೆಗೆ ಅನುಕೂಲಕವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

    ಸದಸ್ಯೆ ನೂರುಲ್ಲಾ ಮಾತನಾಡಿ, ಪುರಸಭೆ ವಾಹನಗಳ ಡೀಸೆಲ್ ಮತ್ತು ನಿರ್ವಹಣೆಗಳಿಗಾಗಿ 45 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ವಾರದ ಆರು ದಿನಗಳಲ್ಲೂ ಎಲ್ಲ ವಾರ್ಡಗಳಲ್ಲೂ ಕಸ ಶೇಖರಣೆ ಮಾಡಲು ವಾಹನಗಳನ್ನು ಬಳಕೆ ಮಾಡಿಕೊಂಡು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

    ಹಲವು ಸದಸ್ಯರು ಬಜೆಟ್‌ನಲ್ಲಿ ಮೀಸಲಿರಿಸಿರುವ ಅನುದಾನಗಳ ಸದ್ಬಳಕೆಗೆ ಸಲಹೆಗಳನ್ನು ನೀಡಿದರು. ಮುಖ್ಯಾಧಿಕಾರಿ ನಾಗರತ್ನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts