More

    ಪಾಗಲ್​ ಪ್ರೇಮಿಯ ಪ್ರತೀಕಾರದ ಹುಚ್ಚಾಟ ಮಾಡಿರುವ ಅನಾಹುತ ಏನೆಂದು ತಿಳಿದರೆ ಶಾಕ್​ ಆಗೋದ ಗ್ಯಾರಂಟಿ!

    ನೋಯ್ಡಾ: ಅವರಿಬ್ಬರೂ ತುಂಬಾ ವರ್ಷಗಳಿಂದ ಪ್ರೇಮಿಸುತ್ತಿದ್ದರು. ಒಟ್ಟಾಗಿ ಖಾಸಗಿ ಕ್ಷಣಗಳನ್ನೂ ಕಳೆದಿದ್ದರು. ಆದರೆ, ಯಾವುದೋ ಒಂದು ವಿಷಯದಲ್ಲಿ ಮೂಡಿದ ಭಿನ್ನಾಭಿಪ್ರಾಯ ಇಬ್ಬರನ್ನೂ ಬೇರೆ ಮಾಡಿತು.

    ಇದರಿಂದ ನೊಂದ ಪ್ರೇಮಿ, ಯುವತಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಆಕೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ. ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಕುಚೇಷ್ಟೆಯ ಹಾಗೂ ಲಂಪಟರ ಕೈಗೆ ಈ ಚಿತ್ರಗಳು ಸಿಕ್ಕು ಪೋರ್ನ್​ ವೆಬ್​ಸೈಟ್​ಗಳನ್ನು ತಲುಪಿದವು. ಒಂದಲ್ಲ, ಎರಡಲ್ಲ, ಬರೋಬ್ಬರಿ 500 ಪೋರ್ನ್​ ವೆಬ್​ಸೈಟ್​ನಲ್ಲಿ ಆ ಯುವತಿಯ ಖಾಸಗಿ ಚಿತ್ರಗಳು ಪ್ರಕಟವಾಗಿವೆಯಂತೆ!

    ಈ ವಿಷಯವನ್ನು ತಿಳಿಸಿರುವ ನೋಯ್ಡಾದ ಡಿಸಿಪಿ (ಮಹಿಳಾ ಸುರಕ್ಷತೆ) ವೃಂದಾ ಶುಕ್ಲಾ 500 ಅಶ್ಲೀಲ ಚಿತ್ರಗಳ ಮಾರಾಟಗಾರರಿಗೆ ಈ ಚಿತ್ರಗಳು ಸಿಕ್ಕಿವೆ. ಅವರೆಲ್ಲರೂ ಅದನ್ನು ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಿದ್ದಾರೆ. ಈ ಅಕ್ರಮವಾದ ಚಿತ್ರಗಳು ನಾಲ್ಕೈದು ಜನರ ವಾಟ್ಸ್​ಆ್ಯಪ್​ನಲ್ಲಿ ಇರುವುದು ಪತ್ತೆಯಾಗಿದೆ. ಇದೀಗ ಅವರೆಲ್ಲರಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಉಡುಪಿಯಲ್ಲಿ ಲವ್​ ಜಿಹಾದ್​? ಮುಸ್ಲಿಂ ಯುವಕನ ಬಲೆಗೆ ಸಿಲುಕಿದಳೇ 18ರ ಯುವತಿ…

    ಪಶ್ಚಿಮ ಬಂಗಾಳದಲ್ಲಿ ಬಂಧನ: ತನ್ನ ಖಾಸಗಿ ಫೋಟೋಗಳನ್ನು ಪಾಗಲ್​ ಪ್ರೇಮಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ಯುವತಿ ಜೂನ್​ 3ರಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಳು. ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಂದಿನಿಂದಲೂ ತನಿಖೆ ಆರಂಭಿಸಿದ್ದರು.

    ತನ್ನ ಪ್ರೇಯಸಿಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕವಾಗಿ ಆಕೆಗೆ ಅವಮಾನಿಸಿದ ಬಳಿಕ ಬಂಧನದ ಭೀತಿಯಿಂದ ಆತ ಪಶ್ಚಿಮ ಬಂಗಾಳದ ಭರೂಯಿಪುರ ಜಿಲ್ಲೆಯಲ್ಲಿ ಅಡಗಿಕೊಂಡಿದ್ದ. ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಜೂನ್​ 6ರಂದು ಆತನನ್ನು ಬಂಧಿಸಿ, ನೋಯ್ಡಾಕ್ಕೆ ಕರೆತಂದಿದ್ದಾರೆ. ಇದೀಗ ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ವೃಂದಾ ಶುಕ್ಲಾ ತಿಳಿಸಿದ್ದಾರೆ.

    ನಿಮಗೋಸ್ಕರ ಸಾಯಲು ರೆಡಿ ಎಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರಕ್ಕೆ ನೆಟ್ಟಿಗರ ಬಹುಪರಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts