More

  ಡಿ. 29ಕ್ಕೆ ಕಾಟೇರ ಫಿಕ್ಸ್ ; ಏನಂತಾರೆ ನಿರ್ದೇಶಕ ತರುಣ್​ ಸುಧೀರ್​?

  | ಹರ್ಷವರ್ಧನ್ ಬ್ಯಾಡನೂರು

  ದರ್ಶನ್ ನಟಿಸಿರುವ ತರುಣ್ ಸುಧೀರ್ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ‘ಕಾಟೇರ’. ‘ಚೌಕ’ ಮತ್ತು ‘ರಾಬರ್ಟ್’ ಚಿತ್ರಗಳ ಬಳಿಕ ದರ್ಶನ್ ಮತ್ತು ತರುಣ್ ಮತ್ತೆ ಒಂದಾಗಿದ್ದು, ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿರುವುದು ‘ಕಾಟೇರ’ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿದೆ. 1970ರ ದಶಕದಲ್ಲಿ ನಡೆದ ನೈಜ ಘಟನೆಗಳಿಂದ ಸ್ಪೂರ್ತಿ ಪಡೆದಿರುವ ಚಿತ್ರವಿದು. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಅದರ ನಡುವೆ ಚಿತ್ರತಂಡ ‘ಕಾಟೇರ’ ರಿಲೀಸ್ ದಿನಾಂಕವನ್ನು ಡಿ. 29ಕ್ಕೆ ಅಂತಿಮಗೊಳಿಸಿದೆ.

  ಇದನ್ನೂ ಓದಿ : ಸಲ್ಮಾನ್‌ಗೆ ಮತ್ತೊಮ್ಮೆ ಬೆದರಿಕೆ!; ಲಾರೆನ್ಸ್ ಬಿಷ್ಣೊಯ್ ಗ್ಯಾಂಗ್‌ನಿಂದ ಗಿಪ್ಪಿ ಮನೆ ಮೇಲೆ ದಾಳಿ

  ಡಿ. 29ಕ್ಕೆ ಕಾಟೇರ ಫಿಕ್ಸ್ ; ಏನಂತಾರೆ ನಿರ್ದೇಶಕ ತರುಣ್​ ಸುಧೀರ್​?

  ನಿರ್ದೇಶಕ ತರುಣ್ ಸುಧೀರ್, ‘ಈ ವರ್ಷವೇ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆವು. ಅದರಂತೆ ಈ ವರ್ಷದ ಕೊನೆಯ ಶುಕ್ರವಾರ ಸಿನಿಮಾ ರಿಲೀಸ್ ಮಾಡಲಿದ್ದೇವೆ. ಡಿ. 29ರಂದು ವರ್ಷದಂತ್ಯದ ಜತೆಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮವಿರಲಿದೆ. ಹಾಗೇ ಸೋಮವಾರ ಜ. 1ರಂದು ರಜೆಯಿರುವ ಕಾರಣ, ಸುದೀರ್ಘ ವೀಕೆಂಡ್ ಸಿಗಲಿದೆ. ಹೀಗಾಗಿ ನಿರ್ಮಾಣ ಸಂಸ್ಥೆ, ಚಿತ್ರತಂಡ ಎಲ್ಲರೂ ಸೇರಿ ಡಿ. 29ಕ್ಕೆ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

  ಇದನ್ನೂ ಓದಿ : ‘ಸಲಾರ್’​ ಭಾಗ 1 ‘ಉಗ್ರಂ’ ರಿಮೇಕಾ? ಪ್ರಶಾಂತ್ ನೀಲ್​ ಬಿಚ್ಚಿಟ್ರು ರೋಚಕ ಸಂಗತಿ!

  ಡಿ. 29ಕ್ಕೆ ಕಾಟೇರ ಫಿಕ್ಸ್ ; ಏನಂತಾರೆ ನಿರ್ದೇಶಕ ತರುಣ್​ ಸುಧೀರ್​?

  ಡಿ. 29 ಅದೃಷ್ಟದ ದಿನ!
  ಕನ್ನಡ ಚಿತ್ರರಂಗದ ಪಾಲಿಗೆ ಡಿಸೆಂಬರ್ ತಿಂಗಳು, ಅದರಲ್ಲೂ ಡಿಸೆಂಬರ್‌ನ ಕೊನೆಯ ಶುಕ್ರವಾರ ಅದೃಷ್ಟದ ದಿನ ಎಂದು ಸಾಬೀತಾಗಿದೆ. 1972ರ ಡಿ.29ರಂದು ವಿಷ್ಣುವರ್ಧನ್, ಅಂಬರೀಷ್ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ‘ನಾಗರಹಾವು’ ರಿಲೀಸ್ ಆಗಿತ್ತು. 2006ರ ಡಿ. 29ರಂದು ‘ಮುಂಗಾರು ಮಳೆ’, 2014ರ ಡಿ. 25ರಂದು ಯಶ್, ರಾಧಿಕಾ ನಟಿಸಿದ್ದ ‘ಮಿ. ಆ್ಯಂಡ್ ಮಿಸಸ್ ರಾಮಾಚಾರಿ’, 2016ರ ಡಿ. 30ರಂದು ‘ಕಿರಿಕ್ ಪಾರ್ಟಿ’, 2019ರ ಡಿ. 27 ‘ಅವನೇ ಶ್ರೀಮನ್ನಾರಾಯಣ’, ‘ಚಮಕ್’, ‘ಶ್ರಾವಣಿ ಸುಬ್ರಮಣ್ಯ’, ‘ಮೊದಲ ಸಲ’, ‘ರಾಮ್’, ‘ರಾಕಿ’, ‘ಸ್ವಾತಿ ಮುತ್ತು’ ಸೇರಿ ಹಲವು ಹಿಟ್ ಚಿತ್ರಗಳು ಡಿಸೆಂಬರ್ ತಿಂಗಳ ಕೊನೆಯ ಶುಕ್ರವಾರ ರಿಲೀಸ್ ಆಗಿ ಯಶಸ್ಸು ಗಳಿಸಿವೆ.

  ಡಿ. 29ಕ್ಕೆ ಕಾಟೇರ ಫಿಕ್ಸ್ ; ಏನಂತಾರೆ ನಿರ್ದೇಶಕ ತರುಣ್​ ಸುಧೀರ್​?
  ಡಿ. 29ಕ್ಕೆ ಕಾಟೇರ ಫಿಕ್ಸ್ ; ಏನಂತಾರೆ ನಿರ್ದೇಶಕ ತರುಣ್​ ಸುಧೀರ್​?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts