More

    ವಿದೇಶದಲ್ಲಿ ವ್ಯಾಸಂಗ ಸಾಧ್ಯವಾಗಲಿಲ್ಲ ಅಂತ ನೇಣಿಗೆ ಶರಣಾದ ಡಿಪ್ಲೊಮಾ ವಿದ್ಯಾರ್ಥಿ!

    ನೆಲಮಂಗಲ: ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರಿ ಸಾಧಿಸುವ ಹಂಬಲದಲ್ಲಿ ತನ್ನ ಶಿಕ್ಷಣದ ಬಗ್ಗೆ ಕನಸು ಕಂಡಿರುತ್ತಾರೆ. ಹೆಚ್ಚಾಗಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಅಪಾರವಾದ ಕನಸು ಕಟ್ಟಿಕೊಂಡಿರುತ್ತಾರೆ. ಹೀಗಿರುವಾಗ ಎಂತಹ ಕಷ್ಟ ಎದುರಾದರೂ ವಿದ್ಯಾರ್ಥಿಗಳು ಅಂಜದೆ ಮುನ್ನಡೆಯಬೇಕು. ಆದರೆ ಇಂದಿನ ವಿದ್ಯಾರ್ಥಿಗಳ ಮನಸ್ಸು ದುರ್ಬಲವಾಗುತ್ತಿದೆ. ಸಣ್ಣ ಸಮಸ್ಯೆಯಾದರೂ ಆತ್ಮಹತ್ಯೆಯ ದಾರಿ ಹಿಡುಯುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ 18 ವರ್ಷದ ವಿದ್ಯಾರ್ಥಿಯೊಬ್ಬನ ದುರಂತ ಅಂತ್ಯ.

    ಹುಬ್ಬಳ್ಳಿ ಮೂಲದ ಆದಿತ್ಯ ಸಂಕಣ್ಣ(18) ಎಂಬ ವಿದ್ಯಾರ್ಥಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯಾರ್ಥಿ ಆದಿತ್ಯ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಹಂಬಲ ಹೊಂದಿದ್ದ. ಆದರೆ ವಿದೇಶದಲ್ಲಿ ವ್ಯಾಸಾಂಗ ಮಾಡಲು ಬೇಕಾದಷ್ಟು ಅಂಕ ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಷ್ಟವಿಲ್ಲದೆ ಖಾಸಗಿ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್​​ನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ. ಇದು ಖಿನ್ನತೆಗೆ ಕಾರಣವಾಗಿದ್ದು, ಇದೀಗ ಆದಿತ್ಯ ಡಿಪ್ಲೋಮಾ ಕೋರ್ಸ್​ನ 3ನೇ ಸೆಮಿಸ್ಟರ್ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ಆದಿತ್ಯ ಸಂಕಣ್ಣ ಡೆತ್ ನೋಟ್​ನಲ್ಲಿ, ಜೀವನದಲ್ಲಿ ಜಿಗುಪ್ಸೆ ಮತ್ತು ಭರವಸೆ ಕಳೆದುಕೊಂಡಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಬೆಂಗಳೂರು ಉತ್ತರ ತಾಲ್ಲೂಕು ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts