More

    ಕ್ರಿಕೆಟಿಗ ದಿನೇಶ್ ಕಾರ್ತಿಕ್- ದೀಪಿಕಾಗೆ ಅವಳಿ ಮಕ್ಕಳು

    ಚೆನ್ನೈ: ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ದಂಪತಿ ಈಗ ಅವಳಿ ಗಂಡು ಮಕ್ಕಳ ತಂದೆ-ತಾಯಿಯಾಗಿದ್ದಾರೆ. ಕಾರ್ತಿಕ್-ದೀಪಿಕಾ ಗುರುವಾರ ಟ್ವಿಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಮಕ್ಕಳಿಗೆ ಕಬೀರ್ ಪಲ್ಲಿಕಲ್ ಕಾರ್ತಿಕ್ ಮತ್ತು ಜಿಯಾನ್ ಪಲ್ಲಿಕಲ್ ಕಾರ್ತಿಕ್ ಎಂದು ಹೆಸರಿಡಲಾಗಿದೆ. ಶ್ವಾನ ಪ್ರಿಯರಾಗಿರುವ ದಂಪತಿ ತಮ್ಮ ನೆಚ್ಚಿನ ನಾಯಿ ‘ಕೋಕೋ ಚಾನೆಲ್’ ಅನ್ನೂ (ಲ್ಯಾಬ್ರಡೂಡಲ್ ತಳಿ) ಕುಟುಂಬದ ಭಾಗವಾಗಿ ಪರಿಗಣಿಸಿದ್ದು, ‘ನಾವೀಗ 3ರಿಂದ 5 ಆಗಿದ್ದೇವೆ’ ಎಂದು ಟ್ವೀಟಿಸಿದ್ದಾರೆ.

    ‘ಕೋಕೋ ಚಾನೆಲ್’ ಅನ್ನು ತಮ್ಮ ಮೊದಲ ಮಗುವೆಂದೇ ಪರಿಗಣಿಸಿರುವ ಕಾರ್ತಿಕ್-ದೀಪಿಕಾ, ಅದರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆನ್ನೂ ಹೊಂದಿದ್ದು, ಅದಕ್ಕೆ 7 ಸಾವಿರಕ್ಕೂ ಅಧಿಕ ಹಿಂಬಾಲಕರೂ ಇದ್ದಾರೆ. ಇತ್ತೀಚೆಗೆ ಐಪಿಎಲ್‌ನಲ್ಲಿ ರನ್ನರ್‌ಅಪ್ ಸ್ಥಾನ ಪಡೆದ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಭಾಗವಾಗಿದ್ದ 36 ವರ್ಷದ ಕಾರ್ತಿಕ್, 2015ರ ಆಗಸ್ಟ್‌ನಲ್ಲಿ ದೀಪಿಕಾ ಅವರನ್ನು ಹಿಂದು ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಕಾರ ವರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts