More

    ನೀರಾವರಿ ಯೋಜನೆ ಡಿಜಿಟಲೀಕರಣ : ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ

    ತುಮಕೂರು: ನೀರಾವರಿ ತಜ್ಞ ದಿವಂಗತ ಜಿ.ಎಸ್.ಪರಮಶಿವಯ್ಯ ಅವರು ರಾಜ್ಯದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ನೀರಾವರಿ ಯೋಜನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಅವುಗಳನ್ನು ಸಂಗ್ರಹಿಸಿ ಜೋಪಾನ ಮಾಡುವುದರ ಜತೆಗೆ ಡಿಜಿಟಲೀಕರಣ ಮಾಡಲಾಗುವುದು ಎಂದು ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಹೇಳಿದರು.

    ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಮಂಗಳವಾರ ನೀರಾವರಿ ಯೋಜನೆಗಳ ಸಂಬಂಧ ಚರ್ಚಿಸಲು ಭೇಟಿಯಾದ ಸಂಸದ ಜಿ.ಎಸ್.ಬಸವರಾಜು ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ ಅವರು, ಡಿಜಲಿಟೀಕರಣ ಮಾಡುವ ಮೂಲಕ ಅವರ ಎಲ್ಲ ಯೋಜನೆಗಳನ್ನು ಅಧ್ಯಯನ ಮಾಡಿ ಜಾರಿ ಮಾಡಲು ಸಕಾಲವಿದು ಎಂದರು.

    ನೀರಾವರಿ ಚಿಂತಕ, ಜೆಡಿಎಸ್ ಮುಖಂಡ ಕೋನರೆಡ್ಡಿ ಮಾತನಾಡಿ, ಜಿ.ಎಸ್.ಪರಮಶಿವಯ್ಯ ವರದಿ ಆಧಾರಿತ ಬೆಣೆಹಳ್ಳ ಯೋಜನೆ ಜಾರಿ ಮಾಡಲು ನಿಗಮ ಮುಂದಾಗಿರುವುದು ಹರ್ಷ ತಂದಿದೆ. ಜಾತಿ, ಪಕ್ಷ ರಾಜಕಾರಣ ಮಾಡದೇ ಎಲ್ಲ ಪಕ್ಷಗಳಲ್ಲಿರುವ ನೀರಾವರಿ ಚಿಂತಕರನ್ನು ಸೇರಿಸಿ, ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗೆ ಒಂದು ಸಮಿತಿಯನ್ನು ಸರ್ಕಾರ ರಚಿಸುವುದು ಸೂಕ್ತವಾಗಿದೆ. ಸಂಸದ ಜಿ.ಎಸ್.ಬಸವರಾಜು ನೇತೃತ್ವ ವಹಿಸಲಿ ಎಂದು ಸಲಹೆ ನೀಡಿದರು. ನಿಯೋಗದಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ವೇದಾನಂದ ಮೂರ್ತಿ, ವೆಂಕಟೇಶ್ ಮೂರ್ತಿ, ಕಿರ್ಸೋರ್, ಚೌಡಪ್ಪ ಉಪಸ್ಥಿತರಿದ್ದರು.

    ಎಚ್‌ಡಿಡಿ ಸಲಹೆ ಬೇಕು: ನೀರಾವರಿ ಚಿಂತಕ, ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರ ಸಲಹೆಗಳನ್ನು ಪಡೆದು ಯೋಜನೆ ರೂಪಿಸುವುದು ಅನಿವಾರ್ಯವಾಗಿದೆ. ಕೋನರೆಡ್ಡಿ ಈ ಸಂಬಂಧ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸವುದು ಸೂಕ್ತ. ಪಕ್ಷ ರಾಜಕಾರಣ ಚುನಾವಣೆಗೆ ಸೀಮೀತವಾಗಲಿ, ನಮ್ಮ ಗುರಿ ರೈತರ ಕಷ್ಟಗಳಿಗೆ ಸ್ಪಂದಿಸುವುದಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು. ಶೀಘ್ರದಲ್ಲಿ ಎಲ್ಲ ಪಕ್ಷಗಳ ನೀರಾವರಿ ಸಮಾನ ಮನಸ್ಕರ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts