More

    ಐಂದ್ರಿತಾ- ದಿಗಂತ್​ ಎಷ್ಟು ವರ್ಷದ ಬಳಿಕ ಒಟ್ಟಿಗೆ ನಟಿಸ್ತಿದ್ದಾರೆ ಗೊತ್ತ?; ಈ ಜೋಡಿಗೆ ಕಿಚ್ಚನ ಹಾರೈಕೆಯೂ ಸಿಕ್ಕಿದೆ

    ಬೆಂಗಳೂರು: ಆಫ್​ ಸ್ಕ್ರೀನ್​ ದಂಪತಿ ದಿಗಂತ್ ಮತ್ತು ಐಂದ್ರಿತಾ ಇದೀಗ ಸುದೀರ್ಘ ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. 2012ರಲ್ಲಿ ತೆರೆಗೆ ಬಂದಿದ್ದ ಪಾರಿಜಾತ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಚೌಕ ಸಿನಿಮಾದಲ್ಲಿ ನಟಿಸಿದ್ದರೂ, ಇಬ್ಬರು ಮುಖಾಮುಖಿ ಆಗಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ.

    ಹೌದು, ಈಗಾಗಲೇ ಶಿವಮೊಗ್ಗ, ಸಾಗರ, ನಿಟ್ಟೂರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ಚಿತ್ರದ ಶೂಟಿಂಗ್​ನಲ್ಲಿ ದಿಗಂತ್ ಮತ್ತು ಐಂದ್ರಿತಾ ಸಹ ಭಾಗವಹಿಸಿದ್ದಾರೆ. ಇಬ್ಬರು ಒಟ್ಟಾಗಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಐಂದ್ರಿತಾ, ‘ಎಂಟು ವರ್ಷದ ಬಳಿಕ ಮತ್ತೆ ನನ್ನ ಆಫ್​ ಸ್ಕ್ರೀನ್​ ಲವ್ ಜತೆ ತೆರೆಹಂಚಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

    ಇದನ್ನೂ ಓದಿ: ಎಂ.ಜಿ.ಶ್ರೀನಿವಾಸ್-ರಂಜನಿ ರಾಘವನ್ ‘ವೆಟರನ್’

    ಐಂದ್ರಿತಾ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ‘ಸೂಪರ್​.. ನಿಮ್ಮನ್ನು ಮತ್ತೆ ಒಟ್ಟಿಗೆ ತೆರೆ ಮೇಲೆ ನೋಡುವುದೇ ಚೆಂದ. ಒಳ್ಳೆಯದಾಗಲಿ. ಖುಷಿ ನಿಮ್ಮದಾಗಲಿ’ ಎಂದು ಸುದೀಪ್ ಸಹ ಶುಭ ಹಾರೈಸಿದ್ದಾರೆ. ವಿನಾಯಕ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ರಂಜನಿ ರಾಘವನ್​ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಕನ್ನಡದಲ್ಲಿ ರಚಿತಾ ರಾಮ್​ ಮಾಡಲಿರುವ ಪಾತ್ರ ಬಾಲಿವುಡ್​ನಲ್ಲಿ ಜಾನ್ವಿ ಕಪೂರ್​ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts