More

    ಮುಂಬೈ ಅಂಡರ್​ವರ್ಲ್ಡ್​ನಿಂದ ಕಾಂಗ್ರೆಸ್​ ಫಂಡ್​ ಪಡೆಯುತಿತ್ತೇ?: ಸಂಜಯ್​ ರಾವತ್​ ಹೇಳಿಕೆಗೆ ಮಾಜಿ ಸಿಎಂ ಫಡ್ನವಿಸ್ ಪ್ರತಿಕ್ರಿಯೆ​

    ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಂಡರ್​ವರ್ಲ್ಡ್​ ಡಾನ್​ ಕರೀಮ್​ ಲಾಲ್​ರನ್ನು ಭೇಟಿ ಮಾಡಿದ್ದರು ಎಂಬ ಶಿವಸೇನಾ ಸಂಸದ ಸಂಜಯ್​ ರಾವತ್​ ಹೇಳಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ಮುಂಬೈ ಅಂಡರ್​ವರ್ಲ್ಡ್​ನಿಂದ ಕಾಂಗ್ರೆಸ್​ ಫಂಡ್​ ಪಡೆಯುತಿತ್ತೇನೋ? ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಸಂಶಯ ವ್ಯಕ್ತಪಡಿಸಿದ್ದಾರೆ.

    ಇದರಿಂದ ರಾಜ್ಯದಲ್ಲಿ ರಾಜಕೀಯ ಅಪರಾಧೀಕರಣದ ಆರಂಭವಾಗಿರಬಹುದೇ? ಮುಂಬೈ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್​ ಬೆಂಬಲ ಸೂಚಿಸಿರಬಹುದೇ? ಆ ದಿನಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್​ ತೋಳ್ಬಲ ಉಪಯೋಗಿಸಿತ್ತೆ ಎಂದು ಫಡ್ನವಿಸ್​ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು: ಸಂಜಯ್​ ರಾವತ್​

    ಸಚಿವಾಲಯದಲ್ಲಿ ಯಾರು ಸೇರಬೇಕು?, ಮುಂಬೈ ಪೊಲೀಸ್ ಆಯುಕ್ತರು ಯಾರಾಗಬೇಕೆಂದು ಡಾನ್​ಗಳು ನಿರ್ಧರಿಸುತ್ತಿದ್ದರು ಎಂದು ಸಂಜಯ್​ ರಾವತ್​ ಹೇಳಿದ್ದಾರೆ. ಮಾಜಿ ಪ್ರಧಾನಿ ಬಗ್ಗೆ ಸಂಜಯ್​ ರಾವತ್​ ಗಂಭೀರ ಆರೋಪ ಮಾಡಿದ್ದರೂ, ಈವರೆಗೂ ಕಾಂಗ್ರೆಸ್​ ಏಕೆ ಸುಮ್ಮನಿದೆ? ಈ ಪ್ರಶ್ನೆಗಳಿಗೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಉತ್ತರಿಸಬೇಕೆಂದು ಫಡ್ನವಿಸ್​ ಆಗ್ರಹಿಸಿದ್ದಾರೆ.

    ಬುಧವಾರ ಮರಾಠಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್​ ರಾವತ್​ ಮಾತನಾಡಿ, ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್​ವರ್ಲ್ಡ್​ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್​ ಹಾಜಿ ಮಸ್ತಾನ್​ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್​ ರಾವತ್​ ಬಿಚ್ಚಿಟ್ಟಿದ್ದರು. ಇದು ಎಲ್ಲೆ ತೀವ್ರ ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts