More

    ‘ದುಬಾರಿ’ ನಂತರ ಧ್ರುವ ಅಭಿನಯದ ಚಿತ್ರ ಯಾವುದು?

    ಬೆಂಗಳೂರು: ‘ಪೊಗರು’ ಬಿಡುಗಡೆಯ ಹಂತಕ್ಕೆ ಬಂದಿದೆ. ‘ದುಬಾರಿ’ ಇನ್ನೇನು ಶುರುವಾಗುವುದರಲ್ಲಿದೆ. ಈ ಮಧ್ಯೆ, ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ.

    ಇದನ್ನೂ ಓದಿ: ಸಿನಿಘಮಾ ಕಿರುಚಿತ್ರೋತ್ಸವ – ಚಾಮುಂಡೇಶ್ವರಿ ಸ್ಟುಡಿಯೋಕ್ಕೆ 5 ದಶಕದ ಸಂಭ್ರಮ

    ಎರಡು ವರ್ಷಗಳ ಹಿಂದೆಯೇ ಧ್ರುವ, ನಿರ್ಮಾಪಕರಾದ ಉದಯ್​ ಮೆಹ್ತಾ ಮತ್ತು ರಾಘವೇಂದ್ರ ಹೆಗ್ಡೆ ಅವರಿಂದ ಅಡ್ವಾನ್ಸ್​ ತೆಗೆದುಕೊಂಡಿದ್ದು, ಅವರಿಗಾಗಿ ಚಿತ್ರ ಮಾಡಿಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಅದರಂತೆ, ಈಗಾಗಲೇ ಉದಯ್​ ಮೆಹ್ತಾ ನಿರ್ಮಾಣದ ‘ದುಬಾರಿ’ ಚಿತ್ರದಲ್ಲಿ ಧ್ರುವ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ, ರಾಘವೇಂದ್ರ ಹೆಗ್ಡೆ ಅವರೊಂದಿಗೆ ಇರುವ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ ಧ್ರುವ. ಈ ಮೂಲಕ ತಮ್ಮ ಮುಂದಿನ ಚಿತ್ರ ರಾಘವೇಂದ್ರ ಅವರಿಗೆ ಎಂಬ ಹಿಂಟ್​ ಕೊಟ್ಟಿದ್ದಾರೆ.

    ರಾಘವೇಂದ್ರ ಹೆಗ್ಡೆ ಜತೆಗೆ ಇರುವ ಒಂದು ಫೋಟೋವನ್ನು ಧ್ರುವ, ಬುಧವಾರ ಮಧ್ಯಾಹ್ನ ಶೇರ್​ ಮಾಡಿಕೊಂಡಿದ್ದರು. ‘ರಾಘವೇಂದ್ರ ಒಂದು ಕಥೆ ಹೇಳಿದರು. ಅದ್ಭುತವಾದ ಫಸ್ಟ್​ ಹಾಫ್​. ಕಥೆ ಕೇಳಿ ಮನಸ್ಸು ಫ್ರೆಶ್​ ಆಯಿತು’ ಎಂದು ಬರೆದುಕೊಂಡಿದ್ದಾರೆ.

    ಈ ಚಿತ್ರ ಯಾವಾಗ ಶುರುವಾಗಬಹುದು ಎಂದು ಈಗಲೇ ಹೇಳುವುದು ಕಷ್ಟ. ‘ದುಬಾರಿ’ ಮುಗಿಯುವುದಕ್ಕೆ ಇನ್ನೂ ಒಂದಿಷ್ಟು ಸಮಯ ಬೇಕು. ಬಹುಶಃ ಮುಂದಿನ ವರ್ಷದ ಕೊನೆಗೆ ‘ದುಬಾರಿ’ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆ ನಂತರ ಈ ಚಿತ್ರ ಪ್ರಾರಂಭವಾಗುವ ನಿರೀಕ್ಷೆ ಇದೆ.

    ಇದನ್ನೂ ಓದಿ: 2021ರ ಮೊದಲ ಚಿತ್ರವಾಗಿ ‘ರಾಜತಂತ್ರ’

    ಅಂದಹಾಗೆ, ರಾಘವೇಂದ್ರ ಹೆಗ್ಡೆ ಇದಕ್ಕೂ ಮುನ್ನ ದರ್ಶನ್​ ಅಭಿನಯದ ‘ಜಗ್ಗುದಾದಾ’ ಚಿತ್ರವನ್ನು ನಿರ್ದೇಶಿಸಿದ್ದರು. ಆ ನಂತರ ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಇದೀಗ ಧ್ರುವ ಅಭಿನಯದ ಹೊಸ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದು, ಈ ಚಿತ್ರದ ಬಗ್ಗೆ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.

    PHOTO GALLERY| ನಟಿ ಸಮಂತಾ ನಯಾ ಅವತಾರ್ ನೋಡಿದ್ರೆ ನೀವು ನಿಬ್ಬೆರಗಾಗುವುದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts