More

    ರಿಯಲ್​ ಎಸ್ಟೇಟ್​ ಅಕ್ರಮ ವ್ಯವಹಾರ: ಡಿಎಚ್‌ಎಫ್‌ಎಲ್ ಅಧ್ಯಕ್ಷ ಕಪಿಲ್ ವಾಧವನ್ ಬಂಧಿಸಿದ ಮುಂಬೈ ಜಾರಿ ನಿರ್ದೇಶನಾಲಯ

    ಮುಂಬೈ: ಭೂಗತ ದೊರೆ ಇಕ್ಬಾಲ್ ಮಿರ್ಚಿ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಪಿಲ್ ವಾಧವನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

    ಪ್ರಕರಣ ಸಂಬಂಧ ವಿಚಾರಣೆ ಹಾಗೂ ತನಿಖೆ ವೇಳೆ ಕಪಿಲ್​ ವಾಧವನ್​ ಅವರು ಸಹಕರಿಸಲಿಲ್ಲ. ಹಾಗಾಗಿ ಅವರನ್ನು ಬಂಧಿಸಬೇಕಾಯಿತು ಎಂದು ಇಡಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ಪ್ರಕರಣವು ಇಕ್ಬಾಲ್​ ಮಿರ್ಚಿಯ ಮುಂಬೈನ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟದ್ದು. ಇಂತಹ ಮೂರು ಅಕ್ರಮ ಆಸ್ತಿಗಳನ್ನು ಕಪಿಲ್​ ಅವರ ಸಹೋದರನ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು. ಕಪಿಲ್​ ಅವರ ಸೋದರನ ಸಂಸ್ಥೆ ಡಿಎಚ್‌ಎಫ್‌ಎಲ್​ನ ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು.

    ರಿಯಲ್​ ಎಸ್ಟೇಟ್​ ಬಿಜಿನೆಸ್​ ಸಂಬಂಧ ಇಡಿಯು ಇಕ್ಬಾಲ್​ ಮಿರ್ಚಿ ಮತ್ತು ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಿಸಿತ್ತು. ಇವರು ದೊಡ್ಡ ದೊಡ್ಡ ದುಬಾರಿ ಕಟ್ಟಡಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಈ ಎಲ್ಲ ವ್ಯವಹಾರಗಳು ಅಕ್ರಮ ಎಂದು ಇಡಿ ದೂರಿದೆ.

    ಇಕ್ಬಾಲ್​ ಮಿರ್ಚಿ 2013ರಲ್ಲಿ ಲಂಡನ್​ನಲ್ಲಿ ಮೃತಪಟ್ಟಿದ್ದಾನೆ. ಈತ ಕುಖ್ಯಾತ ಭೂಗತ ದೊರೆ ದಾವೂದ್​ ಇಬ್ರಾಯಿಂನ ಬಲಗೈ ಬಂಟನಾಗಿದ್ದ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts