More

    ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಅಪಾರ

    ಧಾರವಾಡ: ಎಲ್ಲರನ್ನೂ ಸಾಮಿಪ್ಯಕ್ಕೆ ತರುವ ಸಾಮರ್ಥ್ಯ ಸಂಗೀತಕ್ಕಿದೆ. ಧಾರವಾಡದ ನೆಲ ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಬಹುಪಾಲು ದಿಗ್ಗಜರನ್ನು ನೀಡಿದೆ. ಸಂಗೀತವು ತಾನಾಗಿಯೇ ಬರುವ ಸರಳ ವಿದ್ಯೆಯಲ್ಲ. ಅದಕ್ಕೆ ಕಠಿಣ ಪರಿಶ್ರಮದ ಅಧ್ಯಯನ ಅಗತ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.
    ನಗರದ ನಾದಲಹರಿ ಸಂಗೀತ ಟ್ರಸ್ಟ್ ಇಲ್ಲಿನ ಅಣ್ಣಾಜಿರಾವ್ ಶಿರೂರ ರಂಗಮAದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜೈಪುರ ಅತ್ರೌಲಿ ಘರಾಣೆಯ ಸುಪ್ರಸಿದ್ಧ ಗಾಯಕ ಪಂ. ಪಂಚಾಕ್ಷರಸ್ವಾಮಿ ಮತ್ತಿಗಟ್ಟಿ ಅವರ 10ನೇ ಸ್ಮತಿ ಸಂಗೀತ ಸಮಾರೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿ ಸಮಾಜ, ತಂದೆ, ತಾಯಿ ಹಾಗೂ ಗುರುವಿಗೆ ಸದಾ ಕೃತಜ್ಞನಾಗಿರಬೇಕು. ಇವರೆಲ್ಲರ ಸಹಕಾರದಿಂದ ಅವರ ವ್ಯಕ್ತಿತ್ವ ನಿರ್ಮಾಣವಾಗಿರುತ್ತದೆ ಎಂದರು.
    ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿದಂಬರ ಹಾವನೂರ ಹಾಗೂ ಎಸ್.ಎಸ್. ಹಿರೇಮಠ ಮಾತನಾಡಿದರು.
    ನಾದಲಹರಿ ಸಂಗೀತ ಟ್ರಸ್ಟ್ ಅಧ್ಯಕ್ಷ ಡಾ. ಮೃತ್ಯುಂಜಯ ಅಗಡಿ ಅಧ್ಯಕ್ಷತೆ ವಹಿಸಿದ್ದರು. ರವಿ ಕುಲಕರ್ಣಿ ನಿರೂಪಿಸಿದರು.
    ನಂತರ ದೆಹಲಿಯ ಖ್ಯಾತ ಹಿಂದೂಸ್ಥಾನಿ ಗಾಯಕಿ ಡಾ. ನಬನೀತಾ ಚೌಧರಿಯವರು ರಾಗ ರಾಗೇಶ್ರೀ ಹಾಗೂ ರಾಗಭೈರವಿಯಲ್ಲಿ ಭಜನ್ ಪ್ರಸ್ತುತಪಡಿಸಿದರು. ಧಾರವಾಡದ ಜೈಪುರ ಅತ್ರೌಲಿ ಘರಾಣೆಯ ಗಾಯಕ ಡಾ. ಮೃತ್ಯುಂಜಯ ಅಗಡಿ ಗಾಯನದಲ್ಲಿ ರಾಗ ಧವಳಶ್ರೀ ಮತ್ತು ರಾಗ ನಂದ ಹಾಗೂ ವಚನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಉಸ್ತಾದ್ ನಿಸಾರ್ ಅಹ್ಮದ್, ಶ್ರೀಧರ ಮಾಂಡ್ರೆ ಹಾಗೂ ಸಂವಾದಿನಿಯಲ್ಲಿ ಗ್ವಾಲಿಯರ್‌ನ ವಿವೇಕ ಜೈನ್ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts