More

    ಧಾರವಾಡದ ಪೊಲೀಸ್ ಜೀಪು ಗೋಕರ್ಣಕ್ಕೆ ಯಾಕೆ ಬಂತು? ಅದರಲ್ಲಿದ್ದ ನಾಲ್ವರನ್ನು ಕರೊನಾ ಕಾರ್ಯಪಡೆ ವಶಕ್ಕೆ ಪಡೆದಿದ್ದೇಕೆ?

    ಗೋಕರ್ಣ: ಧಾರವಾಡದ ಪೊಲೀಸ್ ಅರಣ್ಯ ರಕ್ಷಕ ದಳಕ್ಕೆ ಸೇರಿದ ಜೀಪು ಆ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಲ್ಲವೇ? ದೂರದ ಊರಿಗೆ ಬರಬೇಕೆಂದರೂ ಯಾವುದಾದರೂ ಕಚೇರಿಯ ಕೆಲಸ ಇರಬೇಕಲ್ಲವೇ?

    ಅದ್ಯಾವುದೂ ಇಲ್ಲದೆ ಪೊಲೀಸ್ ವಾಹನವನ್ನು ಬಳಸಿ ಸ್ವಂತದ ಕೆಲಸ ಮಾಡಿಕೊಂಡು ಪಾರಾಗಲು ಯತ್ನಿಸಿದ ನಾಲ್ವರನ್ನು ಇಲ್ಲಿನ ಹಿತ್ತಲಮಕ್ಕಿ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಈ ಜೀಪ್‌ನಲ್ಲಿ ಚಾಲಕ ಹಳೇ ಹುಬ್ಬಳ್ಳಿಯ ಅಲ್ತಾಫ್‌ನಗರದ ಗೌಸ್‌ಹಣಗಿ, ಅಬ್ದುಲ್ ರಜಾಕ್, ಬಾಗಲಕೋಟೆ ಸಸಾಲಟ್ಟಿಯ ಮುತ್ತಪ್ಪ ಧನಪಾಲ ಪಾಟೀಲ, ಹುಬ್ಬಳ್ಳಿ ಅರವಿಂದ ನಗರದ ಇಮ್ತಿಯಾಜ್ ಕ್ವಾಜಾ ಹುಸೇನ್ ಮತ್ತು ತೇರದಾಳ ತಳವಾರ ಗಲ್ಲಿಯ ಪ್ರಭುಲಿಂಗ ರಮೇಶ ನೀಲನವರ್ ಗೋಕರ್ಣಕ್ಕೆ ಬಂದಿದ್ದರು.

    ತೊರ್ಕೆ ಗ್ರಾಮ ಪಂಚಾಯಿತಿಯ ಕೋವಿಡ್-19 ಕಾರ್ಯಪಡೆಯವರು ಅನುಮಾನ ಬಂದು ಪೊಲೀಸರ ಸಹಾಯದಿಂದ ತಡೆದು ಪ್ರಶ್ನಿಸಿದಾಗ ಸತ್ಯ ಬಯಲಾಯಿತು.

    ಈ ನಾಲ್ವರು ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರಿಗೆ ಸೇರಿದ ಜೆಸಿಬಿಯನ್ನು ಹತ್ತಿರದ ಗ್ರಾಮವೊಂದರಿಂದ ಹುಬ್ಬಳ್ಳಿಗೆ ಒಯ್ಯಲು ಬಂದಿರುವುದಾಗಿ ಪೊಲೀಸರಿಗೆ ತಿಳಿಸಿದರು. ನಾಲ್ವರ ಪೈಕಿ ಇಬ್ಬರು ಜೆಸಿಬಿ ಚಾಲಕರು. ಜೆಸಿಬಿ ಯಾರಿಗೆ ಸೇರಿದ್ದು ಎನ್ನುವುದನ್ನು ಆರೋಪಿಗಳು ಬಾಯಿಬಿಟ್ಟಿಲ್ಲ. ಆರೋಪಿಗಳಲ್ಲಿ ಒಬ್ಬ ಹುಬ್ಬಳ್ಳಿಯ ಪಿಎಸ್‌ಐ ಒಬ್ಬರ ಪರಿಚಯಸ್ಥನಾಗಿದ್ದು, ಅದೇ ಪರಿಚಯ ದುರ್ಬಳಕೆ ಮಾಡಿಕೊಂಡು ಈ ಕೃತ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾನೆ.

    ಇವರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಎಲ್ಲರನ್ನು ಕುಮಟಾದ ಸರ್ಕಾರಿ ಕ್ವಾರಂಟೈನ್ ಹೋಮ್‌ಗೆ ಸೇರಿಸಿದ್ದಾರೆ.

    ರಸ್ತೆಯಲ್ಲಿದ್ದ ಹಣ ತಗೊಂಡವರಿಗೂ ಕ್ವಾರಂಟೈನ್! ಮಾರ್ಗ ಮಧ್ಯೆ ಕಂಡು ಬಂದಿದ್ದ ಸಾವಿರಾರು ರೂ. ನಗದು ಹಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts