More

    ಮನಶ್ಶಾಂತಿಗೆ ಧಾರ್ವಿುಕ ಸಂಪ್ರದಾಯ, ಪರಂಪರೆ ಆಚರಣೆ ಪ್ರೇರಕ

    ಹಂಸಭಾವಿ: ಧಾರ್ವಿುಕ ಸಂಪ್ರದಾಯ, ಪರಂಪರೆ ಮತ್ತು ಆಚರಣೆಗಳು ಮನಸ್ಸಿನ ಶಾಂತಿ ನೆಮ್ಮದಿಗೆ ಪ್ರೇರಕ ಶಕ್ತಿಯಾಗಿವೆ. ಅಧ್ಯಾತ್ಮ ಜ್ಞಾನದ ಅದ್ಭುತ ಸಂಪತ್ತು ಮಾನವ ಜೀವನದ ವಿಕಾಸಕ್ಕೆ ಅಡಿಪಾಯವಾಗುತ್ತದೆ ಎಂದು ಬಾಳೇಹೊನ್ನೂರಿನ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.

    ಸ್ಥಳೀಯ ಶಿವಯೋಗೀಶ್ವರ ಆಶ್ರಮದಲ್ಲಿ ಏರ್ಪಡಿಸಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಹಾಗೂ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಕಣ್ಣು ಚೆನ್ನಾಗಿದ್ದರೆ ಜಗತ್ತನ್ನು ನೋಡಬಹುದು. ನಾಲಿಗೆ ಚೆನ್ನಾಗಿದ್ದರೆ ಜಗತ್ತೇ ನಮ್ಮನ್ನು ನೋಡುತ್ತದೆ. ಶ್ರೇಷ್ಠ ಚಿಂತನೆ ಸಾಮಾನ್ಯ ವ್ಯಕ್ತಿಯನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ. ಸಾತ್ವಿಕ ಶಕ್ತಿ ಬೆಳೆಯಲು ಅರಿವು, ಆಚರಣೆಗಳು ಬಲು ಮುಖ್ಯ. ನಂಬಿಕೆ ಮತ್ತು ಪ್ರಾರ್ಥನೆ ಕಣ್ಣಿಗೆ ಕಾಣದಿರಬಹುದು. ಆಸಾಧ್ಯವಾದುದನ್ನು ಸಾಧಿಸುವ ಶಕ್ತಿ ಎರಡಕ್ಕೂ ಇದೆ. ಹೃದಯದಲ್ಲಿ ಮಧುರತೆ, ನೋಟದಲ್ಲಿ ಸೌಂದರ್ಯ, ಕೆಲಸದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಂಡರೆ ಸುಂದರ ಸಮಾಜ ಕಟ್ಟಲು ಸಾಧ್ಯ. ವೀರಶೈವ ಧರ್ಮದಲ್ಲಿ ವೀರಭದ್ರಸ್ವಾಮಿಗೆ ಅಗ್ರಸ್ಥಾನವಿದೆ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಗಾಗಿ ಪರಶಿವನ ಜಟಾಮುಕುಟದಿಂದ ಅವತರಿಸಿದಾತನೇ ವೀರಭದ್ರಸ್ವಾಮಿ. ದಕ್ಷಬ್ರಹ್ಮನ ದರ್ಪವನ್ನು ನಾಶಗೊಳಿಸಿ ಶಿವಶಕ್ತಿಯನ್ನು ಬೆಳೆಸಿದ ಮಹಿಶಾಸುರ ಶ್ರೀ ರಂಭಾಪುರಿ ಪೀಠದ ಕ್ಷೇತ್ರ ಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ಆತನ ಶಕ್ತಿ ಎಲ್ಲೆಡೆಯೂ ತುಂಬಿದೆ. ಹಂಸಭಾವಿಯಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಜಯಂತ್ಯುತ್ಸವ ಮಾಡಿರುವುದು ಸಂತೋಷ ತಂದಿದೆ ಎಂದರು.

    ಸ್ಥಳೀಯ ಶಿವಯೋಗೀಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು.

    ಹಿರೇಮಾಗಡಿಯ ಮುರುಘಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ರಂಭಾಪುರಿ ಬೆಳಗು ಮಾಸಿಕವನ್ನು ಬಿಡುಗಡೆ ಮಾಡಿದರು.

    ರಾಣೆಬೆನ್ನೂರಿನ ಹಿರೇಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಮಡ್ಲೂರು ಮುರುಘಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಹಂಸಭಾವಿ ಬೇಡ ಜಂಗಮ ಟ್ರಸ್ಟಿನ ಅಧ್ಯಕ್ಷ ಷಣ್ಮುಕಯ್ಯಾ ಮಳೇಮಠ ಅಧ್ಯಕ್ಷತೆ ವಹಿಸಿದ್ದರು.

    ಡಾ.ಎಸ್.ಎಸ್. ಛತ್ರದಮಠ, ಮಲ್ಲಯ್ಯಾಹಿರೇಮಠ, ಎಸ್.ಎಸ್. ಮಳೇಮಠ, ಎಂ.ಎಂ. ಮಳೇಮಠ, ಚಂದ್ರಯ್ಯಾ ಹಳ್ಳೂರಮಠ, ಕರಿಬಸಯ್ಯಾ ಬಸರೀಹಳ್ಳಿಮಠ, ಮೃತ್ಯುಂಜಯ ಹಿರೇಮಠ, ಚನ್ನಬಸಯ್ಯಾ ಹಳ್ಳೂರಮಠ, ಶಿವಯೋಗಿ ಕೆರೂಡಿ, ಮೃತ್ಯುಂಜಯ ಬಾಸೂರ, ಮೋಹನಗೌಡ ಪಾಟೀಲ, ಎಂ.ಎಂ. ಕೆಂಬಿ, ಮರಿಸ್ವಾಮಿ ಹಿರೇಮಠ ಶ್ರೀಗಳಿಂದ ಗುರು ರಕ್ಷೆ ಸ್ವೀಕರಿಸಿದರು.

    ಎಸ್.ಕೆ. ಚನ್ನವೀರಗೌಡ್ರ ದಂಪತಿ ಹಾಗೂ ಮೃತ್ಯುಂಜಯ ಉಜನಿಮಠ ದಂಪತಿಗೆ ಸೇವಾ ಸಮಿತಿಯಿಂದ ಗೌರವ ಸಲ್ಲಿಸಲಾಯಿತು.

    ಸ್ಪೂರ್ತಿ ಚಪ್ಪರದಹಳ್ಳಿಮಠ ಪ್ರಾರ್ಥಿಸಿದರು. ಜಂಗಮ ಸಮಾಜದ ಕಾರ್ಯದರ್ಶಿ ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಸ್ವಾಗತಿಸಿದರು. ಡಾ.ಗುರುಪಾದಯ್ಯಾ ಸಾಲಿಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts