More

    ಗುರು ದ್ವಾದಶಿ 21 ವರ್ಷಗಳಿಂದ ಆಚರಣೆ

    ಗಂಗಾವತಿ: ನಗರದ ಶಾರದಾನಗರದ ಶಾರದಂಬೆ ದೇವಾಲಯದಲ್ಲಿ ಜಗದ್ಗುರು ಶಂಕರಚಾರ್ಯರ ಸೇವಾ ಟ್ರಸ್ಟ್‌ನಿಂದ ಶ್ರೀಗುರು ದ್ವಾದಶಿ ಆಚರಣೆಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ದೇವಾಲಯದಲ್ಲಿ ಶ್ರೀದತ್ತ ಪಾದುಕೆಗಳ ಪ್ರದಕ್ಷಣೆ

    ದೇವಾಲಯದಲ್ಲಿ ಶ್ರೀದತ್ತ ಪಾದುಕೆಗಳ ಪ್ರದಕ್ಷಣೆ, ರುದ್ರಾಭಿಷೇಕ, ಪಂಚಾಮತ ಅಭಿಷೇಕ, ಅಷ್ಟವಧಾನ ಸೇವೆ, ಶಾರದಾ ಶಂಕರ ಭಕ್ತ ಭಜನಾ ಮಂಡಳಿಯಿಂದ ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಂತರ ಶಂಗೇರಿ ಜಗದ್ಗುರುಗಳ ಶ್ರೀಭಾರತಿ ತೀರ್ಥ ಸ್ವಾಮೀಜಿಗಳ ಸನ್ಯಾಸತ್ವ ಸುವರ್ಣ ಮಹೋತ್ಸವ ಸಮಾರಂಭದ ಮಹತ್ವದ ಕುರಿತು ಭಕ್ತರಿಗೆ ತಿಳಿಸಲಾಯಿತು.

    ಇದನ್ನೂ ಓದಿ: ದೀಪಾವಳಿಗೆ ಅಫ್ಗನ್​ ಕ್ರಿಕೆಟಿಗ ನೆರವು: ರಹಮಾನುಲ್ಲಾ ಗುರ್ಬಾಜ್ ನಡೆಗೆ ನೆಟ್ಟಿಗರು ಮೆಚ್ಚುಗೆ…

    ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಗುರು ದ್ವಾದಶಿ ವಿಶೇಷ ದಿನವನ್ನು 21 ವರ್ಷಗಳಿಂದ ಆಚರಿಸಲಾಗುತ್ತಿದೆ. ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮವಾಗಿದೆ. ಶಂಗೇರಿ ಶ್ರೀಗಳ ಸನ್ಯಾಸತ್ವದ ಸುವರ್ಣ ಮಹೋತ್ಸವ ನಿಮಿತ್ತ ವರ್ಷವಿಡೀ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

    ಸಾಹಿತಿ ಉಮೇಶ ರಚಿಸಿರುವ ಅಕ್ಕಲಕೋಟೆ ಅನನ್ಯ ಜ್ಯೋತಿ ಎಂಬ ಧಾರ್ಮಿಕ ಗ್ರಂಥ ಬಿಡುಗಡೆಗೊಳಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವೇದಬಾಯಿ ದೇಸಾಯಿ, ಬ್ರಾಹ್ಮಣ ಸಮಾಜದ ಮುಖಂಡರಾದ ಭೀಮಸೇನ್‌ರಾವ್ ದೇಸಾಯಿ, ರಾಘವೇಂದ್ರ ಅಳವಂಡಿಕರ್, ಜಗನ್ನಾಥ್ ಅಳವಂಡಿಕರ್, ಪ್ರಹ್ಲಾದರಾವ್, ಗುರುಭಟ್ ಕರಮುಡಿಕರ್, ಶ್ರೀಪಾದರಾವ್ ಮುಧೋಳಕರ್, ಬಾಲಕೃಷ್ಣದೇಸಾಯಿ, ದತ್ತಣ್ಣ ಹೊಸಳ್ಳಿ , ನಾಗರಾಜ್ ಇತರರಿದ್ದರು.
    ಸಂಪನ್ನ: ಶ್ರೀಗಳ ಸನ್ಯಾಸತ್ವ ಸುವರ್ಣಮಹೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸೌಂದರ್ಯ ಲಹರಿ ಪಾರಾಯಣದ ಸಮಾರೋಪ ಸಂಪನ್ನ ಜರುಗಿತು. ಪ್ರಧಾನ ಅರ್ಚಕ ಕುಮಾರ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ಸೌಂದರ್ಯ ಲಹರಿ ಭಗಿನಿರ ಸಂಘ ಸದಸ್ಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts