More

    ಧಾರವಾಡ ಜಿಲ್ಲೆಯಲ್ಲಿ 89,141 ಹೆಕ್ಟೇರ್​ ಬೆಳೆ ಹಾನಿ; ಸಚಿವ ಹಾಲಪ್ಪ ಆಚಾರ್​ ಹೇಳಿಕೆ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 2 ಲಕ್ಷ 73 ಸಾವಿರ ಹೆಕ್ಟೇರ್​ ಬಿತ್ತನೆಯಾಗಿದೆ. 89,141 ಹೆಕ್ಟೇರ್​ ಕೃಷಿ ಬೆಳೆ ಹಾನಿಯಾಗಿದೆ. ಇದರಲ್ಲಿ. 61,566 ಹೆಕ್ಟೇರ್​ ಹೆಸರು ಬೆಳೆ ಹಾನಿಯಾಗಿದೆ. 916 ಹೆಕ್ಟೇರ್​ ಉದ್ದು ಹಾನಿಯಾಗಿದೆ. ವಿಮಾ ಕಂಪನಿಗಳು, ಕೃಷಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸೂಕ್ತವಾಗಿ ಸ್ಪಂದಿಸಬೇಕು. ತ್ವರಿತವಾಗಿ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್​ ಆದೇಶಿಸಿದರು.
    ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಗುರುವಾರ ಬೆಳೆ ಹಾನಿಗೀಡಾಗಿದ್ದ ರೈತರ ಜಮೀನು ವೀಸಿ, ನಂತರ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಎನ್​ಡಿಆರ್​ಎ್​ನಿಂದ 6,800 ರೂ. ಹಾಗೂ ಎಸ್​ಡಿಆರ್​ಎ್​ನಿಂದ 6,800 ರೂ. ಸೇರಿ ಪ್ರತಿ ಹೆಕ್ಟೇರ್​ಗೆ 13,600 ರೂ. ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದರು.
    ಶಿರಗುಪ್ಪಿ ಹತ್ತಿರದ ಬೆಣ್ಣೆ ಹಳ್ಳದಲ್ಲಿ ಸೇರಿಕೊಂಡಿರುವ ಎರಡೂವರೆ ಎಕರೆ ಪ್ರದೇಶವನ್ನು ಅಧಿಕಾರಿಗಳು ಸರ್ವೇ ಮಾಡಬೇಕು. ಸರ್ವೇ ಕಾರ್ಯ ಮುಗಿದ ಬಳಿಕ ಸ್ಮಶಾನ ಭೂಮಿಯನ್ನು ನೀಡಲಾಗುವುದು ಎಂದರು.

    ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹು-ಧಾ ಪೊಲೀಸ್​ ಆಯುಕ್ತ ಲಾಭೂರಾಮ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್​, ಉಪವಿಭಾಗಾಧಿಕಾರಿ ಅಶೋಕ ತೇಲಿ, ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಪಶುವೈದ್ಯಕಿಯ ಉಪನಿರ್ದೇಶಕ ಡಾ.ಉಮೇಶ ಕೊಂಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಕಿ ಡಾ.ಎಚ್​.ಎಚ್​.ಕುಕನೂರ, ಗಣಿ, ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಚಂದ್ರಶೇಖರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜೇಶ ಬಿಜಾಪುರ, ಉಪನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
    72 ಗಂಟೆಯೊಳಗೆ ಮಾಹಿತಿ ನೀಡಲು ರೈತರಿಗೆ ಮನವಿ
    ಹಾನಿಗೀಡಾದ ಬೆಳೆಗಳ ಬಗ್ಗೆ 72 ಗಂಟೆಗಳ ಒಳಗಾಗಿ ರೈತರು ವಿಮೆ ಕ್ಲೇಮಿಗೆ ಮಾಹಿತಿ ನೀಡಬೇಕು. ಈ ಕುರಿತು ಗ್ರಾಮೀಣ ಭಾಗಗಳಲ್ಲಿ ಡಂಗುರ ಸಾರುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ಅತಿವೃಷ್ಟಿಯಿಂದ ಬೆಳೆಗಳ ಹಾನಿಯ ಜಂಟಿ ಸಮೀಕ್ಷೆ ಕಾರ್ಯ 8 ರಿಂದ 10 ದಿನಗಳಲ್ಲಿ ರ್ಪೂಣಗೊಳಿಸಿ ತಂತ್ರಾಂಶದಲ್ಲಿ ದಾಖಲಿಸಬೇಕು. ಬೆಳೆ ವಿಮಾ ಕಂಪನಿಗಳ ಪ್ರತಿನಿಧಿಗಳು ಗ್ರಾಮೀಣ ಭಾಗದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ರೈತರ ವಸ್ತುಸ್ಥಿತಿ ಸಮರ್ಪಕವಾಗಿ ಅರಿತು ಸೂಕ್ತ ನ್ಯಾಯ ಒದಗಿಸಬೇಕು ಎಂದು ಹಾಲಪ್ಪ ಆಚಾರ್​ ಆದೇಶಿಸಿದರು.
    ರಸ್ತೆ ಸುಧಾರಣೆಗೆ 207 ಕೋಟಿ ರೂ.
    ಜಿಲ್ಲಾ ಮುಖ್ಯ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಸುಧಾರಣೆಗೆ ಸರ್ಕಾರ 207 ಕೋಟಿ ರೂ. ಬಿಡುಗಡೆ ಮಾಡಿದೆ. ಮಳೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗೆ ಇನ್ನೂ ಸುಮಾರು 3 ಕೋಟಿ ರೂ. ಅಗತ್ಯವಿದೆ. ಈ ಹಣ ಬಿಡುಗಡೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts