More

    ಋತುಚರ್ಯೆಯಿಂದ ಮಾನವನ ಬಲವೃದ್ಧಿ

    ಋತುಚರ್ಯೆಯಿಂದ ಮಾನವನ ಬಲವೃದ್ಧಿಆಯುರ್ವೇದದಲ್ಲಿ ಋತುಚರ್ಯುಯ ಹೆಸರಿನಲ್ಲಿ ಮಾಡಲಾದ ಕಾಲದ ವಿಂಗಡಣೆ ಅನನ್ಯವಾದುದು. ವಾತಾವರಣದ ತಾಪಮಾನಕ್ಕೂ ಜೀವಿಗಳ ಆರೋಗ್ಯಕ್ಕೂ ತಳಕುಹಾಕಿದ ವಿಶಿಷ್ಟವಾದ ಚಿಂತನಲಹರಿಯಿದು. ಪ್ರಕೃತಿಯೊಂದಿಗೆ ಬಾಳಿ ಬದುಕುವ ಮನುಷ್ಯನ ಮೇಲೆ ಪರಿಸರದ ಪ್ರಭಾವವನ್ನು ಎಳೆಎಳೆಯಾಗಿ ವಿವರಿಸಿ ಅದಕ್ಕೆ ತಕ್ಕಂತೆ ಆಹಾರ-ವಿಹಾರ, ಆಚಾರ-ವಿಚಾರ, ನಡೆ-ನುಡಿಗಳಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡುಗಳನ್ನು ವಿವರಿಸಿದ ಪರಿಯಂತೂ ಅನನ್ಯವಾದುದು.

    ಪಂಚಸೂತ್ರಗಳು

    ಪಚ್ಚೆಕರ್ಪೂರ: ಚರ್ಮಕ್ಕೆ ಹಿತಕರ.

    ತೊಂಡೆಕಾಯಿ: ಕೆಮ್ಮು ಗುಣಕಾರಿ.

    ದಾಲ್ಚಿನ್ನಿ: ಹೊಟ್ಟೆಯುಬ್ಬರ ನಿವಾರಕ.

    ಕಿತ್ತಳೆ: ವಾಕರಿಕೆ ಶಮನಗೊಳಿಸುವುದು.

    ಸೋನಾಮುಖಿ: ಕಾಮಾಲೆ ಗುಣಪಡಿಸಲು ಸಹಕಾರಿ.

    ಆಹಾರವಸ್ತು ಒಂದೇ. ಆದರೆ ಕಾಲಕ್ಕೆ ಅನುಗುಣವಾಗಿ ಅದು ದೇಹದಲ್ಲಿ ಮಾಡುವ ಕಾರ್ಯಭಾರ ಬೇರೆ! ಹೇಗಿದೆ ಈ ಅಮೂಲ್ಯ ಚಿಂತನೆ? ಸಿಹಿತಿಂಡಿ ಒಂದರ ಉದಾಹರಣೆಯನ್ನು ಗಮನಿಸಿ. ಬೇಸಿಗೆಯಲ್ಲಿ ತುಸು ಹೆಚ್ಚು ಮೈಸೂರುಪಾಕ್ ತಿಂದರೆ ಭೇದಿ ಆಗಿಬಿಡುತ್ತದೆ. ಅದನ್ನೇ ಮಳೆಗಾಲದಲ್ಲಿ ಹೆಚ್ಚಾಗಿ ಸವಿದರೆ ಶೀತ, ಕೆಮ್ಮು ಆರಂಭವಾಗುತ್ತದೆ! ಅದರ ರುಚಿಗೆ ಮಾರುಹೋಗಿ ಆಸೆಯಿಂದ ಚಳಿಗಾಲದಲ್ಲಿ ಮಿತಿಯನ್ನು ಸ್ವಲ್ಪ ಮೀರಿದರೂ ಶರೀರಕ್ಕೆ ಅರಗಿಸಿಕೊಳ್ಳುವ ತಾಕತ್ತಿದೆ! ದವಸ-ಧಾನ್ಯ, ಸೊಪ್ಪು-ತರಕಾರಿಗಳೆಲ್ಲವೂ ವರ್ಷಪೂರ್ತಿ ಒಂದೇ ರೀತಿಯ ಗುಣ ಹೊಂದಿರುವುದಿಲ್ಲ ಎಂಬುದು ಆಯುರ್ವೆದದ ಪ್ರತಿಪಾದನೆ. ತೂಗುಹಾಕಿ ನೋಡಿದರೆ ಅವುಗಳಲ್ಲಿರುವ ಪೋಷಕಾಂಶಗಳು, ಜೀವಸತ್ವಗಳು ಎಲ್ಲವೂ ಅದೇ ಇರಬಹುದು. ಆದರೆ ಗುಣದಲ್ಲಿ ಸಾಕಷ್ಟು ಏರುಪೇರಾಗುತ್ತದೆ! ಬೇಸಿಗೆಯಲ್ಲಿ ಇವುಗಳೆಲ್ಲ ಅತಿ ಕಡಿಮೆ ಬಲದಿಂದ ಕೂಡಿದ್ದರೆ ಮಳೆಗಾಲದಲ್ಲಿ ಮದ್ಯಮ ಬಲ ಹೊಂದಿರುತ್ತವೆ. ಚಳಿಗಾಲದಲ್ಲಿ ಅದೇ ಆಹಾರವಸ್ತು ಎಲ್ಲ ಅಂಶಗಳಿಂದ ಸಮೃದ್ಧವಾಗಿ ಅತ್ಯಂತ ಬಲಶಾಲಿಯಾಗಿರುತ್ತವೆ. ಅದನ್ನು ತಿಂದವರ ಮೇಲೆ ಆಗುವ ಪರಿಣಾಮವೂ ಇದೇ ರೀತಿಯಲ್ಲಿರುತ್ತದೆ!

    ಇದನ್ನೂ ಓದಿ: ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​

    ಕರೊನಾ ವೈರಾಣು ಜಗತ್ತನ್ನು ತಲ್ಲಣಗೊಳಿಸಿರುವ ವಿಪರೀತ ಸನ್ನಿವೇಶದಲ್ಲಿಂದು ನಾವಿದ್ದೇವೆ. ಚಳಿಗಾಲವೆಂದರೆ ಜಗತ್ತಿನ ಜೀವರಾಶಿಗಳೆಲ್ಲ ಬಲ ಪಡೆದುಕೊಳ್ಳುವ ಕಾಲ ಎಂದಮೇಲೆ ವೈರಾಣುವೂ ಸಹಜವಾಗಿ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದು ಅನ್ಯಜೀವಿಗಳನ್ನು ಬಾಧಿಸದೆ ಇರುವುದರಿಂದ ಇಲ್ಲಿ ಸ್ಪರ್ಧೆ ಇರುವುದು ಕೇವಲ ಮನುಷ್ಯ ಹಾಗೂ ವೈರಾಣುವಿನ ನಡುವೆ! ಅದೂ ಅಲ್ಲದೆ ರೋಗಕಾರಕ ಸೂಕ್ಷ್ಮ ಕ್ರಿಮಿಗಳು ಬಿಸಿಯೇರಿದಂತೆ ಚಡಪಡಿಸುವುದು ಹೆಚ್ಚೆಂಬುದು ವೈದ್ಯಲೋಕಕ್ಕೆ ಗೊತ್ತಿರುವ ಇತಿಹಾಸ. ತಂಪಿನಲ್ಲಿ ಇಂಪಾಗಿ ಸೊಂಪಾಗಿ ಉಳಿದು ಬೆಳೆದು ನಿಲ್ಲುತ್ತದೆ ಎಂಬುದೂ ಸಾಮಾನ್ಯಜ್ಞಾನ. ಇದು ವೈರಾಣುವಿಗೆ ಮಾತ್ರವೇ ಇರುವ ಅನುಕೂಲವಂತೂ ಅಲ್ಲ. ವರ್ಷದಲ್ಲಿ ಅತಿ ಹೆಚ್ಚು ಬಲ ಹಾಗೂ ರೋಗನಿರೋಧಕ ಶಕ್ತಿ ಮಾನವರಿಗೆ ಇರುವುದು ಇದೇ ಚಳಿಗಾಲದಲ್ಲಿ! ಅದು ಭಾರತವಿರಲಿ, ದೂರದ ವಿದೇಶವಿರಲಿ. ವೈರಾಣುವಿಗೆ ತಿಳಿದಿರದ ಈ ಕಾಲಕ್ಕೆ ಅನುಗುಣವಾದ ಜೀವನಶೈಲಿಯ ಉನ್ನತೀಕರಣದ ಲಾಭವನ್ನು ನಾವೆಲ್ಲ ಪಡೆದುಕೊಳ್ಳಬೇಕು. ನಮಗಿರುವ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡರೆ ಅಂತಿಮ ಗೆಲುವು ನಮ್ಮದೇ ಹೊರತು ರೋಗಾಣುವಿನದ್ದಲ್ಲ. ಆಯುರ್ವೆದವು ಋತುಚರ್ಯುಯನ್ನು ವಿವರಿಸಿದ್ದೇ ಇದಕ್ಕಾಗಿ ಎಂಬುದೊಂದು ಅಚ್ಚರಿ.

    ಇದನ್ನೂ ಓದಿ: ಪಟಾಕಿ ಚೀಲದ ಮೇಲೇರಿದ ಜೀಪ್ ಬಾನೆತ್ತರ ಚಿಮ್ಮಿದ್ದರಿಂದ ಆರು ಜನಕ್ಕೆ ಗಾಯ

    ಚಳಿಗಾಲದಲ್ಲಿ ಕ್ಷೀರಬಲಾತೈಲ, ಅಶ್ವಗಂಧಬಲಾತೈಲದಿಂದ ಅಭ್ಯಂಗ, ಉದ್ವರ್ತನ ಚಿಕಿತ್ಸೆ, ಸ್ವೇದಕರ್ಮಗಳು, ಉಷ್ಣವಸ್ತ್ರಧಾರಣೆ, ಚಪ್ಪಲಿ ಧರಿಸಿ ಪಾದದ ಉತ್ತಮ ಆರೈಕೆ, ಉಷ್ಣಗೃಹವಾಸ, ತಲೆಗೆ ಪ್ರತಿನಿತ್ಯ ತ್ರಿಫಲಾದಿತೈಲ ಹಚ್ಚುವುದರಿಂದ ಕಣ್ಣಿಗೂ ಹಿತವಾಗುತ್ತದೆ. ವ್ಯಾಯಾಮ, ಲೈಂಗಿಕಕ್ರಿಯೆ ಹೆಚ್ಚಿಸಿದರೆ ಅನುಕೂಲ. ಸಿಹಿ, ಹುಳಿ, ಉಪ್ಪುರಸಗಳ ಆಹಾರಪದಾರ್ಥಗಳು ಆರೋಗ್ಯಕರ. ಕಹಿ, ಖಾರ, ಒಗರುರಸಗಳು ಕಡಿಮೆಯಿರಲಿ. ಜಿಡ್ಡಿನ ಅಂಶವುಳ್ಳ, ಬಿಸಿಯಾದ, ಉತ್ತಮ ಪ್ರಮಾಣದ ಆಹಾರವು ಆಪ್ಯಾಯಮಾನ. ಬಿಸಿನೀರು ಕುಡಿಯುವುದು ಒಳ್ಳೆಯದು. ಸುಲಭವಾಗಿ ಜೀರ್ಣವಾಗುವ ಆಹಾರ, ಶೀತಲ ಅನ್ನಪಾನಗಳು ಒಳ್ಳೆಯದಲ್ಲ. ಅನುಪಾನವಾಗಿ ಹಿಪ್ಪಲಿ, ಶುಂಠಿಯ ಬಳಕೆ ಯೋಗ್ಯ. ಈ ಕಾಲದ ಮಳೆಯ ನೀರು ದೇಹಕ್ಕೆ ಬಲದಾಯಕ. ಅಗರುವಿನ ಧೂಪದ ಹೊಗೆಯು ಚರ್ಮಕ್ಕೆ ಉತ್ತಮ. ಉದ್ದಿನಬೇಳೆ, ಹೆಸರುಕಾಳು, ಹೊಸದಾಗಿ ಬೆಳೆದ ಜೋಳ, ಹೊಸ ಅಕ್ಕಿ, ಹೊಸ ಗೋಧಿಯಿಂದ ತಯಾರಿಸಿದ ವಿಭಿನ್ನ ಆಹಾರಪದಾರ್ಥಗಳು ಆರೋಗ್ಯದಾಯಕ. ತೈಲದ ಯಥೇಚ್ಛ ಬಳಕೆ, ಕಬ್ಬು, ಕಬ್ಬಿನ ಉತ್ಪನ್ನಗಳು, ಜೇನುತುಪ್ಪ, ಸ್ವದೇಶಿ ದನದ ಹಾಲು, ಹಾಲಿನ ಉತ್ಪನ್ನಗಳು ದೇಹಕ್ಕೆ ಅನುಕೂಲವನ್ನು ಉಂಟುಮಾಡುತ್ತವೆ.

    ಕೊನೇಹನಿ: ಮರದರಿಶಿಣದ ಕಾಂಡವನ್ನು ಅರೆದು ಲೇಪ ಹಚ್ಚಿದರೆ ಗಾಯವು ಬೇಗನೆ ಗುಣವಾಗುತ್ತದೆ.

    ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts