More

    ಧನ್ವಂತರಿ: ಸದಾಚಾರದ ಒಂಬತ್ತು ರಹಸ್ಯಗಳು!

    ಕಾಲಾಂತರಗಳಲ್ಲೂ ಯಾವುದೇ ಬದಲಾವಣೆ ಇಲ್ಲದೆಯೇ ಸ್ವಸ್ಥ ಬದುಕಿಗಾಗಿ ಜನರೆಲ್ಲ ಅನುಸರಿಸಲೇಬೇಕಾದ ಸದ್​ವೃತ್ತವನ್ನು ಆಯುರ್ವೆದ ವಿವರಿಸಿದ ಪರಿ ಅನನ್ಯವಾದುದು. ತಿಳಿದೋ ತಿಳಿಯದೆಯೋ ಅಪಕಾರ ಮಾಡಿದವರಿಗೂ ಉಪಕಾರವನ್ನೇ ಮಾಡಬೇಕು. ಅದರಲ್ಲಡಗಿದೆ ಮನುಷ್ಯತ್ವದ ಅಂತರಾಳ. ಎಲ್ಲ ಮನುಜರನ್ನು ತನ್ನದೇ ಮಕ್ಕಳೆಂಬಂತೆ ಅಕ್ಕರೆಯಿಂದ ಇದ್ದು ವಿರೋಧಿಗಳಿಂದ ಸದಾ ದೂರವಿರಬೇಕು. ವೈರಿಗಳ ಸನಿಹದಲ್ಲಿ ಇದ್ದರೆ ‘ದುರ್ಜನರ ಸಂಗ, ಅಭಿಮಾನ ಭಂಗ’ ಎಂಬಂತಾಗುತ್ತದೆ ಎನ್ನುವುದರ ಅರಿವಿರಬೇಕು. ವಿನಯವಂತರು, ಬುದ್ಧಿವಂತರು, ವಿದ್ಯಾವಂತರು, ಆದರ್ಶ ಕುಟುಂಬದಲ್ಲಿ ಜನಿಸಿರುವವರು, ಹಿರಿಯರು, ಸಿದ್ಧಿ ಪಡೆದವರು ಮತ್ತು ಗುರುಗಳ ಉಪಾಸನೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರಬೇಕು.

    ಧನ್ವಂತರಿ: ಸದಾಚಾರದ ಒಂಬತ್ತು ರಹಸ್ಯಗಳು!ಬದುಕು ಸುಂದರವಾಗಿರಬೇಕಾದರೆ ನಮ್ಮ ಮಾತು ಚಿಂತನೆಗಳೂ ಉದಾತ್ತವಾಗಿರಬೇಕು. ಅದಕ್ಕಾಗಿ ಯಾವುದನ್ನು ಇತರರಿಗೆ ಹೇಳಬೇಕು, ಏನನ್ನೆಲ್ಲ ಹೇಳಬಾರದು ಎಂಬುದನ್ನು ಆಯುರ್ವೆದದ ಮೂಲಗ್ರಂಥಗಳು ಸೊಗಸಾಗಿ ವಿವರಿಸಿವೆ. ವಯಸ್ಸು, ಸಂಪತ್ತು, ಕುಟುಂಬದ ಒಡಕು, ರಹಸ್ಯ, ಮಂತ್ರ, ಔಷಧ, ತಪಸ್ಸು, ದಾನ, ಅವಮಾನ ಈ ಒಂಬತ್ತನ್ನು ಗೋಪ್ಯವಾಗಿ ಇಟ್ಟುಕೊಳ್ಳಬೇಕೆಂದಿದೆ ಆಯುರ್ವೆದ! ಅದಕ್ಕಾಗಿಯೇ ಇರಬೇಕು ಹದಿಹರೆಯದ ತರುಣ ತರುಣಿಯರು ತಮ್ಮ ನಿಜ ವಯಸ್ಸನ್ನು ಹೇಳಲು ಸಂಕೋಚಪಡುತ್ತಾರೆ! ಕೆಲವು ವೈದ್ಯರು ಅದರಲ್ಲೂ ಮುಖ್ಯವಾಗಿ ನಾಟಿವೈದ್ಯರು ಔಷಧವನ್ನು ಗೌಪ್ಯವಾಗಿ ಇಡಲು ಪ್ರಯತ್ನಿಸುತ್ತಾರೆ. ನಿಜಕ್ಕೂ ರೋಗಿ ಇದನ್ನು ಮಾಡಬೇಕಾದುದು ಹೊರತು ವೈದ್ಯರಲ್ಲ. ತಾವು ಮಾಡುವ ಜಪ-ತಪಗಳನ್ನು ಸಜ್ಜನರು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ, ಅದರ ಅಗತ್ಯವೂ ಇರುವುದಿಲ್ಲ. ದಾನ ಧರ್ವದಿಗಳಲ್ಲಿ ತೊಡಗಿರುವವರು ಒಂದು ಕೈಯಲ್ಲಿ ನೀಡಿದ ದಾನ ಇನ್ನೊಂದು ಕೈಗೆ ತಿಳಿಯದಷ್ಟು ಎಚ್ಚರ ವಹಿಸುತ್ತಾರೆ! ಅಹಂಕಾರ ಎಳ್ಳಷ್ಟೂ ಬರದಿರಲಿ ಎಂಬ ಸದಾಶಯ ಇದರಲ್ಲಿದೆ. ಕುಟುಂಬದ ಸಣ್ಣಪುಟ್ಟ ಒಡಕು ಹೊರಬಂತೆಂದರೆ ಮತ್ತೆ ಜನರೇ ಅದಕ್ಕೆ ಒಗ್ಗರಣೆ ಹಾಕಿ ದೊಡ್ಡದು ಮಾಡುತ್ತಾರೆ. ಅದರಿಂದ ಮನೆಯವರಿಗೇ ತೊಂದರೆ ಹೊರತು ನೋಡಿ ಖುಷಿಪಡುವ ಪ್ರೇಕ್ಷಕ ಬುದ್ಧಿಯವರಿಗಲ್ಲ.

    ಆಯುರ್ವೆದ ಹೇಳಿದ ಗುಪ್ತಾಚಾರಗಳು ಇಲ್ಲಿಗೇ ನಿಲ್ಲುವುದಿಲ್ಲ. ತನಗೆ ಯಾರಲ್ಲೆಲ್ಲ ಹಗೆತನ ಇದೆಯೆಂಬುದನ್ನು ಬೇರೆಯವರಲ್ಲಿ ಹೇಳಿಕೊಳ್ಳಬಾರದು. ಒಬ್ಬ ವ್ಯಕ್ತಿಗಿರುವ ಶತ್ರುಗಳನ್ನು ಇತರರ ಬಳಿ ರ್ಚಚಿಸಲೂಬಾರದು. ತನಗಾದ ಅವಮಾನವನ್ನು ಹಾಗೂ ತನ್ನೊಡನೆ ಸ್ನೇಹ ತೋರದ ರಾಜನ ನಡವಳಿಕೆಯನ್ನು ಊರೆಲ್ಲ ಹೇಳಿಕೊಂಡು ತಿರುಗಬಾರದು. ಅನಗತ್ಯವಾಗಿ ಇತರರಿಗೆ ಸಾಕ್ಷಿಯಾಗಿ, ಜಾಮೀನುದಾರರಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಕೂಡದು. ತಪ್ಪೆಸಗಿದವರಿಗೆ ಅಪ್ರಾಮಾಣಿಕ ಖಾತರಿದಾರರಾಗಿ ಬಿಡುಗಡೆಗೆ ನೆರವಾಗಬಾರದು. ಜೂಜಾಟದ ವ್ಯಸನದಿಂದ ದೂರವಿರಬೇಕು ಎಂದಿದೆ ಭಾವಪ್ರಕಾಶವೆಂಬ ಗ್ರಂಥ. ತನ್ನದೇ ರಹಸ್ಯವನ್ನು ಹೊರಗೆಡಹುವ ನಾಲಿಗೆ ಚಾಪಲ್ಯಕ್ಕೆ ನಿಯಂತ್ರಣ ಹೇರಬೇಕು, ಇನ್ನೊಬ್ಬರನ್ನು ಹೀಯಾಳಿಸಿ ಅವಮಾನಿಸುವ ಬುದ್ಧಿಯೂ ಇರಕೂಡದು, ತನ್ನನ್ನು ಇತರರೆದುರು ಹೊಗಳಿಕೊಳ್ಳುತ್ತ ದಕ್ಷತೆಯಿಲ್ಲದೆ ಅನಾಗರಿಕ ವರ್ತನೆಯೊಂದಿಗೆ ಇತರರ ಬಗ್ಗೆ ಅಸೂಯೆಪಡಕೂಡದು ಎಂದು ಚರಕಸಂಹಿತೆ ಹೇಳಿದ್ದೂ ಅದೆಷ್ಟು ಮಾರ್ವಿುಕವಾಗಿದೆ.

    ಕ್ವಾರಂಟೈನ್​ನಲ್ಲಿದ್ದ ಈ ವ್ಯಕ್ತಿಯ ಬರ್ತ್​ಡೇ ಇವತ್ತು: ಸಂಜೆ ಕೇಕ್​ ಕಟ್​ ಮಾಡುವವನಿದ್ದ; ಅಷ್ಟರಲ್ಲಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts