More

    ಡಬ್ಬಿಂಗ್ ಮುಗಿಸಿದ ಧನಂಜಯ್ … ಸದ್ಯದಲ್ಲೇ ‘ತೋತಾಪುರಿ’ ಬಿಡುಗಡೆ

    ಬೆಂಗಳೂರು: ‘ತೋತಾಪುರಿ’ ಚಿತ್ರಕ್ಕೆ ಜಗ್ಗೇಶ್​ ಡಬ್ಬಿಂಗ್​ ಮುಗಿಸಿದ ವಿಷಯ ಗೊತ್ತೇ ಇದೆ. ಕಳೆದ ತಿಂಗಳೇ ಜಗ್ಗೇಶ್​ ತಮ್ಮ ಕೆಲಸ ಮುಗಿಸಿದ್ದರು. ಈಗ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಡಾಲಿ’ ಧನಂಜಯ್ ಸಹ ತಮ್ಮ ಡಬ್ಬಿಂಗ್​ ಮುಗಿಸಿದ್ದಾರೆ.

    ಇದನ್ನೂ ಓದಿ: ಇದು ನಟಿ ಅದಿತಿ ಪ್ರಭುದೇವ ಹಳ್ಳಿ ಜೀವನ

    ‘ತೋತಾಪುರಿ’ ಚಿತ್ರವನ್ನು ವಿಜಯಪ್ರಸಾದ್ ನಿರ್ದೇಶಿಸಿದ್ದು, ‘ನೀರ್ ದೋಸೆ’ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಮತ್ತೆ ಈ ಚಿತ್ರದಲ್ಲಿ ಒಗ್ಗೂಡಿದ್ದಾರೆ. ಈ ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರುತ್ತಿದ್ದು, ಸದ್ಯದಲ್ಲೇ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

    ‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್​ ಮತ್ತು ಧನಂಜಯ್​ ಜತೆಗೆ ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಲಾವಿದರು ನಟಿಸಿದ್ದು, ಬೆಂಗಳೂರು, ಮೈಸೂರು, ಕೊಡಗು, ಕೇರಳ ಮೊದಲಾದ ಕಡೆ ಚಿತ್ರೀಕರಣ ಮಾಡಲಾಗಿದೆ.

    ಇದನ್ನೂ ಓದಿ: ಯಾರ್ಯಾರಿಗೆ ಎಷ್ಟೆಷ್ಟು?: ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಲೆಕ್ಕಾಚಾರ

    ಈ ಹಿಂದೆ ‘ಎರಡನೇ ಮದುವೆ’, ‘ಗೋವಿಂದಾಯ ನಮಃ’, ‘ಶಿವಲಿಂಗ’ ಮೊದಲಾದ ಚಿತ್ರಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ಈ ಚಿತ್ರವನ್ನು ತಮ್ಮ ಸುರೇಶ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು ನಿರಂಜನ್ ಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಬದುಕಿನ ಕಹಿ ಅನುಭವಗಳನ್ನು ಬಿಚ್ಚಿಟ್ಟ ಶ್ರೀರಾಮಚಂದ್ರನ ಬೆಡಗಿ: ಆತ್ಮಹತ್ಯೆಗೆ ಯತ್ನಿಸಿದ್ದರಂತೆ ನಟಿ ಮೋಹಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts