More

    ಹನುಮಮಾಲೆ ಧರಿಸಿದ ನೂರಾರು ಭಕ್ತರು

    ಕನಕಗಿರಿ: ಪಟ್ಟಣ ಸೇರಿ ತಾಲೂಕಿನ ನೂರಾರು ಭಕ್ತರು ಹನುಮ ಜಯಂತಿ ಅಂಗವಾಗಿ ಪಟ್ಟಣದ ತೊಂಡಿತೇರಪ್ಪ ದೇವಸ್ಥಾನದಲ್ಲಿ ಸೋಮವಾರ ಹನುಮಮಾಲೆ ವ್ರತ ಆರಂಭಿಸಿದರು.

    ಏ.6ರಂದು ನಡೆಯುವ ಹನುಮ ಜಯಂತಿ ಅಂಗವಾಗಿ ತಾಲೂಕಿನ ಬಸರಿಹಾಳ, ಬೈಲಕ್ಕಂಪುರ, ಮುಸಲಾಪೂರ, ಕನಕಾಪೂರ, ಕಲಿಕೇರಿ ಸೇರಿ ವಿವಿಧ ಗ್ರಾಮಗಳ ನೂರಾರು ಭಕ್ತರು ಹನುಮ ಮಾಲೆ ಧರಿಸಿದ್ದು, ವೈಶಿಷ್ಠೃಪೂರ್ಣವಾಗಿ ವ್ರತಾಚರಣೆಗೆ ಮುಂದಾಗಿದ್ದಾರೆ. ಮಾ.30ರಂದು ಶ್ರೀರಾಮನವಮಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ರಾಮಜಪ ಸಂಕೀರ್ತನಾ ಯಾತ್ರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶ್ರೀರಾಮನ ಭಾವಚಿತ್ರ ಸಹಿತ ಸಾಮೂಹಿಕ ಭಜನೆ ಹಮ್ಮಿಕೊಳ್ಳಲಾಗಿದೆ.

    ಮಾಲಾಧಾರಿ ವೆಂಕೋಬ ಪೂಜಾರ ಮಾತನಾಡಿ, ಪಟ್ಟಣ ಸೇರಿ ತಾಲೂಕಿನ ಐತಿಹಾಸಿಕ ಸ್ಥಳಗಳಲ್ಲಿನ ಆಂಜನೇಯ ದೇವಸ್ಥಾನಗಳಲ್ಲಿ ಹನುಮ ಜಯಂತಿ ಮತ್ತು ಶ್ರೀರಾಮನವಮಿಯನ್ನು ವಿಶಿಷ್ಟವಾಗಿ ಆಚರಿಸಲು ಆಯಾ ದೇವಸ್ಥಾನ ಸಮಿತಿಯವರಿಗೆ ತಿಳಿಸಿದ್ದೇವೆ. ಶ್ರೀ ತೊಂಡಿತೇವರಪ್ಪ ಹನುಮ ಮಾಲಾ ಸೇವಾಸಮಿತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದ್ದೇವೆ. ಶ್ರೀ ರಾಮನವಮಿಯಂದು ಕೊಸಂಬರಿ, ಪಾನಕ ಹಾಗೂ ಹನುಮ ಜಯಂತಿ ಮುನ್ನಾದಿನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದರು.

    ಭಕ್ತರಾದ ಪಂಪಾಪತಿ ಹಡಪದ, ಗೋಪಿನಾಥ ಗೊಂದಳೆ, ಚಂದ್ರಶೇಖರ ಸೂಡಿ, ಮಂಜುನಾಥ ಅಚ್ಚಲಕರ, ವೆಂಕಟೇಶ ಬಲಿಜ, ಶಿವಕುಮಾರ ನಾಯಕ, ಹನುಮೇಶ ಗಂಗಾಮತ, ಚೇತನ ಬ್ಯಾಳಿ, ಕನಕಪ್ಪ, ಪ್ರವೀಣ ಮುಸಲಾಪುರ, ಪರಶುರಾಮ ಕಲಿಕೇರಿ, ವಿಶ್ವನಾಥ ಬೈಲಕ್ಕಂಪುರ, ತಿಮ್ಮಣ್ಣ ಗುಡ್ಡಿ, ಶ್ರೀನಿವಾಸ ಪೂಜಾರಿ, ಬಸವರಾಜ ದಾಸರ, ಶರಣಪ್ಪ ಹಾದಿಮನಿ, ಜೀವಣ್ಣ, ಸಿದ್ದು, ಕಿರಣಕುಮಾರ, ವಿರೇಶ, ಗಂಗಾಧರ, ಭೀಮಣ್ಣ ಗಂಗಾಮತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts