More

    ನಿಷೇಧ ಉಲ್ಲಂಘಿಸಿ ಬಡಿದಾಡಿದ ಭಕ್ತರು

    ಸಿರಗುಪ್ಪ (ಬಳ್ಳಾರಿ): ತಾಲೂಕಿನ ಗಡಿಗ್ರಾಮ, ಸೀಮಾಂಧ್ರ ಪ್ರದೇಶದ ಕರ್ನಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಮಂಡಲದ ನೇರಣಿಕೆ ದೇವರಗುಡ್ಡದಲ್ಲಿ ಪ್ರತಿವರ್ಷದಂತೆ ಈ ಸಲವೂ ವಿಜಯದಶಮಿಯಂದು ದೇವರ ಮೂರ್ತಿಗಳಿಗಾಗಿ ಬಡಿಗೆಗಳಿಂದ ಹೊಡೆದಾಡುವ ಹಬ್ಬ ನಡೆಯಿತು.

    ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಬಡಿಗೆಗಳಿಂದ ಹೊಡೆದಾಡುವುದನ್ನು ಅಲ್ಲಿನ ರಾಜ್ಯ ಸರ್ಕಾರ ನಿಷೇಧಿಸಿ, ಮಾಳಮಲ್ಲೇಶ್ವರ ಗುಡ್ಡದ ಸುತ್ತಲಿನ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಸತತ ಒಂದು ವಾರ ನಡೆಸಿತ್ತು. ಸುತ್ತಲಿನ ಗ್ರಾಮಗಳಿಂದ ದೇವರಗುಡ್ಡಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರನ್ನು ತಡೆಯುವ ಉದ್ದೇಶದಿಂದ ಸುಮಾರು 30 ಭಾಗಗಳಲ್ಲಿ ಚೆಕ್​ಪೋಸ್ಟ್ ನಿರ್ವಿುಸಲಾಗಿತ್ತು. ಕರ್ನಾಟಕ ಭಾಗದ ಮೋಕ ಮತ್ತು ಮಾಟಸೂಗೂರು ಗ್ರಾಮಗಳಲ್ಲೂ ಚೆಕ್ ಪೋಸ್ಟ್ ನಿರ್ವಿುಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರತಿವರ್ಷದಂತೆ ಈ ಸಲವೂ ಸಾವಿರಾರು ಭಕ್ತರು ದೇವರ ಮೂರ್ತಿಗಳಿಗಾಗಿ ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದು, ಸುಮಾರು 50 ಜನಕ್ಕೆ ಮಂಗಳವಾರ ಗಾಯಗಳಾಗಿವೆ.

    ಕನ್ನಡದಲ್ಲಿ ಕಾರಣಿಕ

    ಪ್ರತಿವರ್ಷವು ಇಲ್ಲಿ ನಡೆವ ಕಾರಣಿಕ ಭವಿಷ್ಯ ಹೇಳಿಕೆಯನ್ನು ಕನ್ನಡದಲ್ಲಿಯೇ ಹೇಳುವುದು ವಿಶೇಷ. ಗುಡ್ಡದ ಪಕ್ಕದ ಕೆರೆಯ ಕಟ್ಟೆಯ ಮೇಲಿರುವ ಬಸವಣ್ಣನ ದೇವಸ್ಥಾನದ ಮೇಲೆ ನಿಂತು, ದೇಶದ ಒಳಿತು, ಕೆಡಕುಗಳ ಕುರಿತು, ಮಳೆ ಬೆಳೆಗಳ ಸಮೃದ್ಧಿ ಕುರಿತು ಒಗಟಿನಂತಹ ನಾಲ್ಕು ಸಾಲುಗಳನ್ನು ಅರ್ಚಕರು ಹೇಳುತ್ತಾರೆ. ಈ ಸಲ ‘ಗಂಗೆ ಹೊಳೆದಂಡಿಗೆ ನಿಂತಾಳ, ಮಾಳಮ್ಮವ್ವ ಸವಾರಿ ಮಾಡ್ಯಾಳ, ಮುಂದಿನ ಆರು ತಿಂಗಳವರೆಗೆ 4800 ನಗಳ್ಳಿ, 1600 ಜೋಳ, ಮೂರು ಆರು, ಆರು ಮೂರಾದೀತು ಬಹುಪರಾಕ್’ ಎಂದು ಕಾರಣಿಕ ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts