More

    ಅಭಿವೃದ್ಧಿಯಿಂದ ಗುರುತಿಸಿಕೊಂಡಿದ್ದ ನಾಯಕ

    ಮುನವಳ್ಳಿ: ಸಚಿವ ಸುರೇಶ ಅಂಗಡಿಯವರ ನಿಧನದಿಂದ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಸ್ಮರಣೀಯವಾಗಿವೆ ಎಂದು ಪಟ್ಟಣದ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದ್ದಾರೆ.

    ಗುರುವಾರ ಪಟ್ಟಣದ ಅನ್ನದಾನೇಶ್ವರ ಕಾಲೇಜಿನಲ್ಲಿ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಪಟ್ಟಣದ ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಗುರು-ಹಿರಿಯರು ಸಚಿವ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಚಂದ್ರು ಜಂಬ್ರಿ, ಶ್ರೀಕಾಂತ ಮೀರಜಕರ್, ಸಿ.ಬಿ.ಬಾಳಿ, ರಮೇಶ ಗೋಮಾಡಿ, ನಿಂಗನಗೌಡ ಮಲಗೌಡ್ರ, ಪಂಚಪ್ಪ ಹನಸಿ, ಅಶೋಕ ಗೋಮಾಡಿ. ಜಿ.ಜಿ.ಗಂಗಣ್ಣವರ, ಮಹಾದೇವ ಕಟಿಗೆಣ್ಣವರ ಇದ್ದರು.

    ಮೂಡಲಗಿ ವರದಿ: ದಿ.ಸುರೇಶ ಅಂಗಡಿ ಅವರ ನಿಧನಕ್ಕೆ ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿಯವರ ರಾಜ್ಯಸಭಾ ಸಂಸದರ ಜನ ಸಂಪರ್ಕ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದರು.

    ಬಿಜೆಪಿ ಪ್ರಮುಖರಾದ ಬಸವರಾಜ ಕಡಾಡಿ ಮಾತನಾಡಿ, ಪಕ್ಷದ ಶಿಸ್ತಿನ ಸಿಪಾಯಿ,ಸರಳ ಸಜ್ಜನಿಕೆಯ ವ್ಯಕ್ತಿ, ಕೇಂದ್ರ ಸಚಿವ, ಸಂಸದ ಸುರೇಶ ಅಂಗಡಿ ಅವರ ನಿಧನದ ಸುದ್ದಿ ತಿಳಿದು ಆಘಾತವಾಯಿತು. ನಾಲ್ಕು ಬಾರಿ ಸಂಸದರಾಗಿ ರಾಜ್ಯಕ್ಕೆ ಅನೇಕ ಜನಪರ ಯೋಜನೆ ಜಾರಿಗೊಳಿಸಿದ್ದರು. ಕಳೆದ ಒಂದು ವರ್ಷದಿಂದ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಉತ್ತರ ಕರ್ನಾಟಕ ಭಾಗದಲ್ಲಿ ರೈಲ್ವೆ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದ್ದರು ಎಂದು ಅಂಗಡಿ ಅವರ ಕಾರ್ಯವನ್ನು ಸ್ಮರಿಸಿದರು.

    ಶಿವಪ್ಪ ಕಡಾಡಿ, ಶ್ರೀಶೈಲ ತುಪ್ಪದ, ಅಡಿವೆಪ್ಪ ಕುರಬೇಟ, ಪ್ರಭು ಕಡಾಡಿ, ಪುಂಡಲೀಕ ಅರಬಾವಿ, ಸುನೀಲ ಈರೇಶನವರ, ಮಲ್ಲಪ್ಪ ಖಾನಗೌಡರ, ರಾಮಣ್ಣ ಬಿ.ಪಾಟೀಲ, ಈರಣ್ಣ ಮುನ್ನೋಳಿಮಠ, ಪರಪ್ಪ ಗಿರೆಣ್ಣವರ, ಮಂಜುಳಾ ಹಿರೇಮಠ, ಸುಗಂದಾ ಗೊರಗುದ್ದಿ, ಕೆಂಪಣ್ಣ ಗಡಹಿಂಗ್ಲೆಜ್, ಅಡಿವೆಪ್ಪ ಮುತ್ನಾಳ, ಹನುಮಂತ ಕಲಕುಟ್ರಿ, ಸಿದ್ದಪ್ಪ ಹೆಬ್ಬಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಸವದತ್ತಿ ವರದಿ: ಪಟ್ಟಣದ ಶಾಸಕರ ಕಚೇರಿಯಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ದಿ.ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೋರ್ಚಾ ಕಾರ್ಯಕರ್ತರು, ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts