More

    ವಿಕಲಾಂಗರಿಗೆ ಸ್ವಾಭಿಮಾನಿ ಜೀವನ ಅಗತ್ಯ

    ದೇವದುರ್ಗ: ಅಂಗವಿಕಲರನ್ನು ಸಮಾಜದಲ್ಲಿ ಅಸಮಾನತೆಯಿಂದ ಕಾಣುವುದು ಸರಿಯಲ್ಲ. ಅನುಕಂಪ ಪಡುವ ಬದಲು ಅಗತ್ಯ ಸೌಲಭ್ಯಗಳನ್ನು ನೀಡಿ ಸ್ವಾವಲಂಬಿ ಜೀವನ ನಡೆಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಹೇಳಿದರು.

    ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಪ್ರತಿಧ್ವನಿ ಅಂಗವಿಕಲರ ಸಂಸ್ಥೆ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ, ವಿವಿಧ್ದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಸಮಿತಿಯಿಂದ ಹಮ್ಮಿಕೊಂಡ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಯಾರು ವಿಕಲಚೇತನರಾಗಿ ಹುಟ್ಟಬೇಕೆಂದು ಬಯಸಿದವರಲ್ಲ. ಹುಟ್ಟಿದ ನಂತರವು ಹಲವು ಜನರು ಹಲವು ಕಾರಣಗಳಿಗಾಗಿ ಅಂಗ ನ್ಯೂನತೆ ಹೊಂದುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನೀಡುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

    ಮನೋ ಚೈತನ್ಯ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಬಸನಗೌಡ ದೇಸಾಯಿ ಮಾತನಾಡಿ, 1995ರ ಕಾಯ್ದೆ ಮಾರ್ಪಾಡು ಮಾಡಿ 2016 ಅಂಗವಿಕಲರ ಕಾಯ್ದೆ ಜಾರಿಗೆ ಬಂದಿದೆ. ವಿಕಲಚೇತನರಿಗೆ ಮತ್ತು ವಿಶೇಷ ಚೇತನರಿಗೆ ವಿಶೇಷ ಕಾನೂನು ಮಾರ್ಪಾಟಾಗಿದ್ದು, ವಿಕಲಚೇತನರಿಗೆ ಸಿಗುವ ಸೌಲಭ್ಯಗಳು ದುರುಪಯೋಗಿರುವದು ಕಂಡು ಬಂದಲ್ಲಿ ಅಥವಾ ಜಾರಿಗೊಳಿಸದ ಸಂದರ್ಭದಲ್ಲಿ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts