More

    ರೈತರಿಗೆ ಶೀಘ್ರ ಮೆಕ್ಕೆಜೋಳ ಪರಿಹಾರ ನೀಡಿ

    ದೇವರಹಿಪ್ಪರಗಿ: ರೈತರಿಗೆ ಮೆಕ್ಕೆಜೋಳ ಪರಿಹಾರ ನೀಡುವಲ್ಲಿ ವಿಳಂಬವಾಗಿದ್ದು, ಹಣ ತುಂಬಿದರೂ ಜಿಪಿಎಸ್ ಆಗದೆ ನೂರಾರು ರೈತರಿಗೆ ಅನ್ಯಾಯವಾಗಿದೆ. ತಕ್ಷಣವೇ ತಾಲೂಕು ಆಡಳಿತ ಗಮನ ಹರಿಸಿ ಪರಿಹಾರದ ಹಣ ಕಲ್ಪಿಸಿಕೊಡಬೇಕೆಂದು ಕರವೇ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು.
    ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಮೆಕ್ಕೆಜೋಳ ಬೆಳೆದ ರೈತರಿಗೆ ಅನ್ಯಾಯವಾಗಿದೆ. ಹಣ ತುಂಬಿದರೂ ಜಿಪಿಎಸ್ ಆಗಿಲ್ಲ ಎಂದು ದೂರಿದರು.

    ಕರವೇ ತಾಲೂಕು ಅಧ್ಯಕ್ಷ ಮಡುಗೌಡ ಬಿರಾದಾರ, ಉಮೇಶ ಬಿರಾದಾರ ಮಾತನಾಡಿ, ಮೆಕ್ಕೆಜೋಳ ಬೆಳೆದ ರೈತರಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ವಿಮೆ ಹಣ ತುಂಬಿದರೂ ಜಿಪಿಎಸ್ ಆಗಿಲ್ಲ. ಮೊದಲೇ ಬರಗಾಲ ಜಿಲ್ಲೆಯಾಗಿದ್ದು, ರೈತರು ಸದಾ ಸಂಕಷ್ಟದಲ್ಲಿದ್ದಾರೆ. ಕರೊನಾ ಹಾವಳಿಯಿಂದ ಜನಜೀವನವೇ ಅಸ್ತವ್ಯಸ್ತವಾಗಿದೆ. ಅದಕ್ಕಾಗಿ ಸರ್ಕಾರ ತಾಲೂಕಾಡಳಿತ ತಕ್ಷಣ ಮೆಕ್ಕೆಜೋಳ ಬೆಳೆದ ರೈತರಿಗೆ ವಿಮೆ ಹಣ ಜಮಾ ಆಗುವಂತೆ ಕ್ರಮಕೈಗೊಳ್ಳಬೇಕು. ತುಂಬಿದ ಹಣಕ್ಕೆ ಜಿಪಿಎಸ್ ಮಾಡಿಸಿ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

    ಉಪತಹಸೀಲ್ದಾರ್ ಇಂದಿರಾ ಬಳಗಾನೂರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರವೇ ವಲಯ ಅಧ್ಯಕ್ಷರಾದ ರಾಜು ಮೆಟಗಾರ, ಮಹಾಂತೇಶ ವಂದಾಲ, ವಿಜು ಎಂಬತ್ನಾಳ, ಪ್ರಕಾಶ ಡೋಣೂರಮಠ, ಉಮೇಶ ಬಿರಾದಾರ, ಶರತ ಕುಂಬಾರ, ಚಂದ್ರಶೇಖರ ದಾನಗೊಂಡ, ಮುಕ್ಕಣ್ಣ ಬಿರಾದಾರ, ನಾನಾಗೌಡ ಬಿರಾದಾರ, ಚಂದ್ರಪ್ಪ ಬಿರಾದಾರ, ಗಂಗಾಬಾಯಿ ಬಿರಾದಾರ, ನಾಗಪ್ಪ ಹಚ್ಚಡದ, ಜಕ್ಕಪ್ಪ ಜಾಲವಾದ ಸೇರಿ ದೇವರಹಿಪ್ಪರಗಿ ಮುಳಸಾವಳಗಿ ರೈತರು ಸೇರಿ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ರೈತರಿಗೆ ಶೀಘ್ರ ಮೆಕ್ಕೆಜೋಳ ಪರಿಹಾರ ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts