More

    ಹಂತ ಹಂತವಾಗಿ ಮತಕ್ಷೇತ್ರದ ಎಲ್ಲ ಕೆರೆ ತುಂಬಿಸುವೆ

    ದೇವರಹಿಪ್ಪರಗಿ: ನನ್ನ ಮತಕ್ಷೇತ್ರದ ಎಲ್ಲ ಕೆರೆಗಳನ್ನು ಹಂತ ಹಂತವಾಗಿ ತುಂಬುವ ಮೂಲಕ ಜನ- ಜಾನುವಾರುಗಳಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
    ಇಂಗಳಗಿ ಕೆರೆಗೆ ನೀರು ಪೂರೆಸುವ ಮೂಲಕ ಈ ಭಾಗದ ರೈತ ಸಮುದಾಯದ ಬಹುದಿನದ ಕನಸು ಈಡೇರಿದಂತಾಗಿದೆ ಎಂದು ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾದ ಜಲಸೇತುವೆಗೆ ಬುಧವಾರ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
    ಮುಳವಾಡ ಏತ ನೀರಾವರಿಯ ವಿಜಯಪುರ ಮುಖ್ಯ ಕಾಲುವೆಯಿಂದ ವಿತರಣೆ ಕಾಲುವೆ ಸಂಖ್ಯೆ 37ರ ಉಪ ಸೀಳುಗಾಲುವೆ ಮೂಲಕ 31.29 ಎಂಸಿಎ್ಟಿ ಸಾಮರ್ಥ್ಯದ ಇಂಗಳಗಿ ಕೆರೆಗೆ ನೀರು ಹರಿಸಲು ಜಲಸೇತುವೆ ಅಗತ್ಯವಾಗಿತ್ತು. 2.24 ಕೋಟಿ ರೂ. ವೆಚ್ಚದಲ್ಲಿ 420 ಮೀಟರ್ ಉದ್ದದ ಜಲಸೇತುವೆ ನಿರ್ಮಿಸಿ ಕೆರೆ ತುಂಬಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ದೇವರಹಿಪ್ಪರಗಿ-ಇಂಗಳಗಿ-ಹರನಾಳ ಭಾಗದ ರೈತ ಸಮುದಾಯಕ್ಕೆ ಸಹಕಾರಿಯಾಗಲಿದೆ ಎಂದರು. ನಂತರ ದೇವರಹಿಪ್ಪರಗಿ-ಇಂಗಳಗಿ ಕೆರೆಗಳೆರಡಕ್ಕೂ ಭೇಟಿ ನೀಡಿ ನೀರಿನ ಮಟ್ಟ ವೀಕ್ಷಿಸಿದರು.
    ಬಿಜೆಪಿ ಮುಖಂಡ ಸುರೇಶಗೌಡ ಪಾಟೀಲ ಸಾಸನೂರ, ಉದ್ಯಮಿ ಅಣ್ಣಾರಾಯಗೌಡ ಬಿರಾದಾರ, ತಹಸೀಲ್ದಾರ್ ವೈ.ಬಿ.ನಾಗಠಾಣ, ಪಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ಕಂದಾಯ ನಿರೀಕ್ಷಕ ಆನಂದ ಪಮ್ಮಾರ, ಪಿಎಸ್‌ಐ ಸುರೇಶ ಗಡ್ಡಿ, ಕೆಬಿಜೆಎನ್‌ಎಲ್ ಇಂಜಿನಿಯರ್‌ಗಳಾದ ಜಗದೀಶ ರಾಠೋಡ, ಸಂತೋಷ ಹಿರೇಮಠ, ವಿಶ್ವನಾಥ ಬಿರಾದಾರ, ಬಸವರಾಜ ಜೇವೂರ, ನಿಂಗನಗೌಡ ಬಿರಾದಾರ, ರವಿ ಚಂದ್ರಗಿರಿ, ರವಿಚಂದ್ರ ಪಾಟೀಲ, ಪ್ರೇಮಾನಂದ ದೇಸಾಯಿ, ತಾಪಂ ಸದಸ್ಯ ಶ್ರೀಶೈಲ ಕಬ್ಬಿನ, ಅಶೋಕ ಜೋಷಿ, ರೈತ ಪ್ರತಿನಿಧಿಗಳಾದ ರಾಮು ದೇಸಾಯಿ, ಸೋಮು ಹಿರೇಮಠ, ಅಜೀಜ ಯಲಗಾರ, ಬಸವರಾಜ ಕಲ್ಲೂರ, ಶಂಕರಗೌಡ ಕೋಟಿಖಾನಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಮೇಶ ಮಸಬಿನಾಳ, ಮಾಂತೇಶ ವಂದಾಲ, ಕಾಸು ಕೋರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts