More

    ಆರೋಗ್ಯ ಕೇಂದ್ರಕ್ಕೆ ಶಾಸಕರ ದಿಢೀರ್ ಭೇಟಿ

    ದೇವರಹಿಪ್ಪರಗಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ)ದಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಪಟ್ಟಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಮುಗಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿದರು. ರೋಗಿಗಳು ಹಾಗೂ ಸಾರ್ವಜನಿಕರು ಶಾಸಕರ ಮುಂದೆ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು.
    ಕಳೆದ ಹಲವಾರು ವರ್ಷಗಳಿಂದ ಖಾಯಂ ವೈದ್ಯರು, ವೈದ್ಯಾಧಿಕಾರಿಗಳ ನಿಯೋಜನೆ ಮಾಡಿಲ್ಲ. ಅಗತ್ಯ ಸಿಬ್ಬಂದಿ, ಶೌಚಗೃಹ, ಶುದ್ಧ ಕುಡಿಯುವ ನೀರು, ಔಷಧ, ರೋಗಿಗಳ ಜತೆ ಬಂದವರಿಗಾಗಿ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಏನೇ ಕೇಳಿದರೂ ‘ಡಾ.ಇಲ್ಲ’ ಎಂಬ ಸಿದ್ಧ ಉತ್ತರ ನೀಡುತ್ತಾರೆ ರೋಗಿಗಳು ದೂರು ನೀಡಿದರು.
    ಶಾಸಕರು ಆಸ್ಪತ್ರೆ ಸುತ್ತಮುತ್ತ ಸುತ್ತಾಡಿ ಸಮಸ್ಯೆಗಳನ್ನು ಕಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದರು. ಈ ಆಸ್ಪತ್ರೆ ಅವ್ಯವಸ್ಥೆ ಕುರಿತು ವಿಚಾರಿಸಿದಾಗ ಆದಷ್ಟು ಬೇಗನೆ ವೈದ್ಯರ ನೇಮಕ ಹಾಗೂ ಮೂಲಸೌಕರ್ಯ ಒದಗಿಸುವ ಎಂದು ಶಾಸಕರಿಗೆ ತಿಳಿಸಿದರು.
    ನಂತರ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಶೀಘ್ರ ಅಗತ್ಯ ವೈದ್ಯರ ನೇಮಕ ಹಾಗೂ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ತಾಲೂಕು ಆಸ್ಪತ್ರೆ ಸಲುವಾಗಿ ಸಂಬಂಧಿಸಿದ ಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
    ಮುಖಂಡರಾದ ರಮೇಶ ಇಳಗೇರ, ರಾಜು ಮೆಟಗಾರ, ಭೀಮನಗೌಡ ಸಿದರೆಡ್ಡಿ, ಕಾಶಿನಾಥ ವಾಡೇದಮನಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts