More

    ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನಾರ್ಹ

    ದೇವರಹಿಪ್ಪರಗಿ: ವ್ಯಕ್ತಿ, ವ್ಯಕ್ತಿಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಕರೊನಾ ಮಾಡಿರಬಹುದು. ಆದರೆ, ಮಾನವೀಯತೆ, ಅಂತಃಕರಣಗಳನ್ನಲ್ಲ ಎಂದು ಡಾ.ವೈ.ಬಿ. ಪಾಟೀಲ ಹೇಳಿದರು.
    ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ಡಾ.ಬಿ.ಎಸ್. ಪಾಟೀಲ ೌಂಡೇಷನ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಗೋಂಧಳಿ ಸಮಾಜದ ಬಡವರಿಗೆ ದಿನಸಿ ವಿತರಿಸಿ ಅವರು ಮಾತನಾಡಿದರು.
    ಕರೊನಾ ರೋಗದ ಕುರಿತಾದ ಜಾಗೃತಿ ಹಾಗೂ ತಡೆಗಟ್ಟುವಿಕೆಯಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯವಾದುದು. ಆದ್ದರಿಂದಲೇ ಆಶಾ, ಪೊಲೀಸ್, ವೈದ್ಯಕೀಯ ಸಿಬ್ಬಂದಿಯನ್ನು ಇಡೀ ದೇಶವೇ ಸ್ಮರಿಸುತ್ತಿದೆ. ಅದರಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಬಡವರಿಗೆ ೌಂಡೇಶನ್ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದರು.
    ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಪ್ರಶಾಂತ ಚಿಂಚೋಳಿ, ಸಂತೋಷ ಯಡಹಳ್ಳಿ, ಉದ್ದಿಮೆದಾರರಾದ ಶಶಿಧರ ಪಾಟೀಲ, ರಮೇಶ ಮಸಬಿನಾಳ, ಪ್ರಗತಿ ಪಟ್ಟಣ ಬ್ಯಾಂಕ್ ನಿರ್ವಹಣಾಧಿಕಾರಿ ಕೆ.ಎಸ್.ಪಾಟೀಲ, ಪಪಂ ಸದಸ್ಯ ಕಲ್ಲನಗೌಡ ಪಾಟೀಲ, ಮಹಾಂತೇಶ ವಂದಾಲ, ಕಾಶಿನಾಥ ಕೋರಿ, ಮಹಾಂತೇಶ ಬಿರಾದಾರ, ರಾಜು ಮೆಟಗಾರ ಮಹಾಂತೇಶ ಗುಡಿಮನಿ ಇದ್ದರು.

    ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನಾರ್ಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts