More

    ವರ್ಷದಿಂದ ಪೂಜೆ ಕಾಣದ ಚಳ್ಳಕೇರಮ್ಮ ದೇವಿ; ಪೂಜಾರಿಕೆ ವಿವಾದ ದೇಗುಲಕ್ಕೆ 3 ಬೀಗ !

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ಪೂಜೆ ವಿಚಾರದಲ್ಲಿ ಉಂಟಾದ ವಿವಾದದಿಂದಾಗಿ ದೇವರಮರಿಕುಂಟೆ ಗ್ರಾಮದ ಚಳ್ಳಕೇರಮ್ಮ ದೇವಿಗೆ ಈಗ ನಿತ್ಯ ಪೂಜೆ ಸ್ಥಗಿತಗೊಂಡಿದ್ದು, ದೇಗುಲಕ್ಕೆ ಬೀಗ ಹಾಕಲಾಗಿದೆ.

    ಕ್ಷೇತ್ರದ ಶಾಸಕರಿಂದ 10 ಲಕ್ಷ ರೂ. ಅನುದಾನ ಹಾಗೂ ಭಕ್ತ ಮಹೇಶ್ವರಪ್ಪ ನೀಡಿದ 15 ಲಕ್ಷ ರೂ. ದೇಣಿಗೆ ಜತೆಗೆ ಗುಡಿಕಟ್ಟಿನ ಅಣ್ಣತಮ್ಮಂದಿರಿಂದ ಸಂಗ್ರಹಿಸಿದ ಹಣ ಸೇರಿ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ಸುಂದರವಾಗಿ ನೂತನ ದೇವಸ್ಥಾನ ನಿರ್ಮಿಸಲಾಗಿದೆ. 2020ರ ಫೆಬ್ರವರಿ ತಿಂಗಳಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ 40 ದಿನ ವ್ರತ ಆಚರಿಸಿ ದೇವಸ್ಥಾನ ಲೋಕಾರ್ಪಣೆ ಮಾಡಲಾಗಿತ್ತು.

    ಐದಾರು ತಿಂಗಳು ಮಾತ್ರ ಪೂಜಾ ಕಾರ್ಯ ನಡೆಯಿತು. ನಂತರ ಪೂಜಾರಿಕೆ ಮುಂದುವರಿಸಿಕೊಂಡು ಹೋಗುವ ವಿಚಾರದಲ್ಲಿ ಮನೆತನ ಮತ್ತು ಯಜಮಾನಿಕೆ ಸಂಬಂಧ ಉಂಟಾಗಿರುವ ಮನಸ್ತಾಪ ಸೃಷ್ಟಿಯಾಗಿ ಪೂಜೆ ನೀತು ಹೋಗಿದೆ.

    ಚಳ್ಳಕೇರಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಆದರೂ, ಯಾವುದೇ ಅಹಿತಕರ ಘಟನೆ ಆಗಬಾರದು. ಗ್ರಾಮದ ಒಳಿತಿಗಾಗಿ ಪೂಜೆ ಕಾರ್ಯ ನೆರವೇರಲಿ ಎಂಬ ದೃಷ್ಟಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಉಭಯ ಗುಂಪಿನವರ ಅಭಿಪ್ರಾಯ ತಿಳಿದುಕೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

    ಈಗಾಗಲೇ ಶಾಸಕರ ಅಭಿಪ್ರಾಯದಂತೆ ಪೂಜಾರಿಕೆ ಮಾಡಿಕೊಂಡು ಬಂದಿರುವ ಮನೆತನದವರ ವಂಶವೃಕ್ಷ ಪರಿಶೀಲಿಸಿ ಪೂಜಾ ಕಾರ್ಯಕ್ಕೆ ಜವಾಬ್ದಾರಿ ವಹಿಸಿ, ಆದಷ್ಟು ಬೇಗ ದೇವಸ್ಥಾನದ ಬೀಗ ತೆಗೆಸಲಾಗುವುದು.
    ಎನ್.ರಘುಮೂರ್ತಿ, ತಹಸೀಲ್ದಾರ್
    ಚಳ್ಳಕೆರೆ ತಾಲೂಕಿನ ಕಡದರಹಳ್ಳಿ ಗ್ರಾಮ ದೇವತೆ ದುರುಗಮ್ಮ ದೇವಿ ಪೂಜಾರಿಕೆ ವಿಚಾರದಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದು ಪೂಜಾರಿ ಜಯರಾಮಪ್ಪ ಹತ್ಯೆ ನಡೆದ ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ತಾಲೂಕು ಆಡಳಿತ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು.
    ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts