More

    ತೀವ್ರಗೊಂಡ ರೈತರ ಧರಣಿ

    ದೇವರಹಿಪ್ಪರಗಿ: ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಚಿಕ್ಕರೂಗಿ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಧರಣಿ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

    ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಮುಖಂಡರಾದ ಗ್ರಾಪಂ ಸದಸ್ಯರಾದ ಸಿದಗೊಂಡಪ್ಪಗೌಡ ಪಾಟೀಲ, ವಿದ್ಯಾಧರ ಸಂಗೋಗಿ ಅವರು, ಈ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಬಹಳಷ್ಟಿದ್ದು, ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕಾಲುವೆಗೆ ನೀರು ಬೀಡಬೇಕು ಎಂಬುವುದು ರೈತರ ಹಕ್ಕೊತ್ತಾಯವಾಗಿದೆ ಎಂದರು.

    ಶುಕ್ರವಾರದಿಂದ ಧರಣಿ ಇನ್ನಷ್ಟು ಚುರುಕುಗೊಳಿಸಲಾಗುವುದು. ಧರಣಿಯಲ್ಲಿ ರೈತರು, ಹೆಣ್ಣುಮಕ್ಕಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

    ಧರಣಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ಗುಡ್ಡಳ್ಳಿ, ಎ ಬಿ ಕೊಂಡಗೂಳಿ, ತಿರಕಪ್ಪ ಡಬ್ಬಿಗಾರ, ಭೀರಪ್ಪ ಕುಮುಟಗಿ, ಚಿದಾನಂದ ಹಡಪದ, ಸಂಗಣ್ಣ ಗಣಿಹಾರ, ಶರಣಪ್ಪ ಡಬ್ಬಿಗಾರ, ಶಂಕರಗೌಡ ಬಿರಾದಾರ, ಬಸಗೊಂಡಪ್ಪ ಪೂಜಾರಿ, ಸಾಯಬಣ್ಣ ಸಿಂದಗಿ, ಸಾಯಬಣ್ಣ ಹೊಸಮನಿ, ಹಣಮಂತ ಬಿರಾದಾರ, ಸಂಜೀವ ಚಂಡಕಿ, ಸಿದ್ದಪ್ಪ ಬನಸೋಡೆ, ಸಂತೋಷ ದೇಶಪಾಂಡೆ, ಶಂಕರ ಸಿಂದಗಿ,ಭೀಮರಾಯ ನಾಟೀಕಾರ, ರಾವುತ ನಾಟೀಕಾರ ಸೇರಿದಂತೆ ಚಿಕ್ಕರೂಗಿ ಗ್ರಾಮದ ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts