More

    ದೇವರದೊಡ್ಡಿ ಗ್ರಾಮದಲ್ಲಿ ಆನೆ ದಾಳಿಗೆ ಪಪ್ಪಾಯ ತೋಟ ನಾಶ

    ಕೈಲಾಂಚ: ಹೋಬಳಿಯ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ದೇವರದೊಡ್ಡಿ ಗ್ರಾಮದಲ್ಲಿ ಒಂಟಿ ಸಲಗವೊಂದು ದಾಳಿ ನಡೆಸಿ ಜಯಲಕ್ಷ್ಮಮ್ಮ ಎಂಬ ರೈತ ಮಹಿಳೆಯ ಪಪ್ಪಾಯ ತೋಟವನ್ನು ಧ್ವಂಸಗೊಳಿಸಿದೆ.

    ಬುಧವಾರ ರಾತ್ರಿ ದಾಳಿ ನಡೆಸಿರುವ ಆನೆ ಸುಮಾರು 35ಕ್ಕೂ ಹೆಚ್ಚಿನ ಸಲುಭರಿತ ಪಪ್ಪಾಯಿ ಗಿಡ, ಬೆಳೆ ರಕ್ಷಣೆಗೆ ಬಳಸುತ್ತಿದ್ದ ಟಾರ್ಪಾಲ್, ತೆಂಗಿನಗರಿಯಿಂದ ನಿರ್ಮಿಸಿದ್ದ ಶೆಡ್ ನಾಶಪಡಿಸಿದೆ. ಆನೆ ದಾಳಿಯಿಂದಾದ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವಂತೆ ಜಯಲಕ್ಷ್ಮಮ್ಮ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

    ವಿಷಯ ತಿಳಿದ ಚನ್ನಪಟ್ಟಣ ವಲಯದ ತೆಂಗಿನಕಲ್ಲು ವಿಭಾಗದ ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಅರಣ್ಯ ವೀಕ್ಷಕ ದಿಲೀಪ್, ಅರಣ್ಯ ರಕ್ಷಕ ಪುಟ್ಟಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತ ಮಹಿಳೆಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

    ತೆಂಗಿನಕಲ್ಲು ಅರಣ್ಯ ಬಿಟ್ಟು ಹೋಗದ ಒಂಟಿ ಆನೆ: ಮಲೆ ಮಾದೇಶ್ವರ ಬೆಟ್ಟ ವನ್ಯಜೀವಿ ಅರಣ್ಯದಿಂದ ಆನೆ ಹಿಂಡಿನ ಜತೆ ಬಂದಿರುವ ಆನೆ ಇದಾಗಿದ್ದು, ಹಿಂಡಿನಿಂದ ಬೇರ್ಪಟ್ಟು ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿದೆ. ಅರಣ್ಯ ಇಲಾಖೆ ಆನೆಯನ್ನು ಸ್ವಸ್ಥಾನಕ್ಕೆ ಸೇರಿಸಲು ಪ್ರಯತ್ನಪಟ್ಟರೂ ಮತ್ತೆ ತೆಂಗಿನಕಲ್ಲು ಅರಣ್ಯಕ್ಕೆ ಬರುತ್ತಿದೆ. ಈ ವೇಳೆ ಸುತ್ತಮುತ್ತಲ ಗ್ರಾಮಗಳ ಬಳಿ ದಾಳಿಯಿಟ್ಟು ಬೆಳೆ ಹಾನಿ ಮಾಡುತ್ತಿದೆ.

    ತೆಂಗಿನಕಲ್ಲು ಅರಣ್ಯದಲ್ಲಿ ಮೂರು ಆನೆಗಳಿದ್ದು, ಇದು ಒಂಟಿಯಾಗಿದೆ. ಹಲವಾರು ಆನೆಗಳನ್ನು ಸ್ವಸ್ಥಾನ ಸೇರಿಸಲು ಪ್ರಯತ್ನಿಸಿದರೂ ಈ ಆನೆ ವಾಪಸ್ ಬರುತ್ತಿದೆ. ಉಳಿದ ಆನೆಗಳ ಜತೆ ಈ ಆನೆಯನ್ನು ಕಾರ್ಯಾಚರಣೆ ನಡೆಸಿ ಸ್ವಸ್ಥಾನಕ್ಕೆ ಸೇರಿಸಲಾಗುವುದು.
    ಮಹಮದ್ ಮನ್ಸೂರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts