More

    ಶಿವನಗೌಡ ನಾಯಕರಿಂದ ವಿಪಕ್ಷಗಳ ಟಾರ್ಗೆಟ್; ಸಿಪಿಐಎಂ ಕಾರ್ಯದರ್ಶಿ ನರಸಣ್ಣ ನಾಯಕ ಆರೋಪ

    ದೇವದುರ್ಗ: ಜೆಡಿಎಸ್ ನಾಯಕಿ ಜಿ.ಕರೆಮ್ಮ ನಾಯಕ ಮೇಲೆ ಶಾಸಕ ಕೆ.ಶಿವನಗೌಡ ನಾಯಕ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಖಂಡನೀಯ. ಶಾಸಕರು ತಮ್ಮ ವಿರುದ್ಧ ಧ್ವನಿ ಎತ್ತುವವರು ಹಾಗೂ ವಿಪಕ್ಷಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ ಆರೋಪಿಸಿದರು.

    ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಪ್ರಜಾಪ್ರಭುತ್ವ ಮರೆಯಾಗಿ ನಿರಂಕುಶ ಆಡಳಿತ ಜಾರಿಯಲ್ಲಿದೆ. ಶಾಸಕರ ವಿರುದ್ಧ ಮಾತನಾಡುವವ ಮೇಲೆ ಪೊಲೀಸ್ ಇಲಾಖೆ ಹಾಗೂ ಬೆಂಬಲಿಗರ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದರು.

    ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮಿತಿಮೀರಿವೆ. ಮರಳು ಅಕ್ರಮ ಸಾಗಣೆ, ಮಟ್ಕಾ ದಂಧೆ, ಕಳ್ಳತನ, ಇಸ್ಪೀಟ್ ಜೂಜಾಟ ಸೇರಿ ಹಲವು ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳನ್ನು ತಡೆಯುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಆದರೆ, ಶಾಸಕರ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಹಾಗೂ ಸಮಸ್ಯೆಗಳ ಕುರಿತು ಹೋರಾಟ ಮಾಡುವವರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ.

    ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವೈಫಲ್ಯವೇ ಇಂಥ ಘಟನೆಗಳು ನಡೆಯಲು ಕಾರಣ. ಮೊದಲಿನಿಂದ ಗಟ್ಟಿಧ್ವನಿಯಲ್ಲಿ ಹೋರಾಟ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪೊಲೀಸ್ ಇಲಾಖೆ ಕೆಲಸ ಜನರಿಗೆ ಅನುಮಾನ ಬರುವಂತಿದೆ. ವಿವಿಧ ಇಲಾಖೆಗಳು ಶಾಸಕರ ಕೈಗೊಂಬೆಯಾಗಿವೆ. ವಿರೋಧ ಪಕ್ಷಗಳಿಗೆ ಧಮ್ಕಿ ಹಾಕುವುದು, ಹಲ್ಲೆ ನಡೆಸುವುದು ಶಾಸಕರ ಹತಾಶ ಭಾವನೆ ತೋರಿಸುತ್ತಿದ್ದು, ಅವರಿಗೆ ಸೋಲಿನ ಭೀತಿ ಆವರಿಸಿದೆ ಎಂದು ನರಸಣ್ಣ ನಾಯಕ ಹೇಳಿದರು.

    ಪ್ರಮುಖರಾದ ಶಬ್ಬೀರ್ ಜಾಲಹಳ್ಳಿ, ಹನುಮಂತ ಮಂಡಲಗುಡ್ಡ, ಮೌನೇಶ ಜಾಲಹಳ್ಳಿ, ಮುಕ್ಕನಗೌಡ, ದುರುಗೇಶ ಹೊರಟಿ, ಗ್ರಾಪಂ ಸದಸ್ಯ ಮುಕ್ತುಮ್ ಪಾಷಾ, ರಂಗನಾಥ ಬುಂಕಲದೊಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts