More

    ಮೂಲಸೌಲಭ್ಯಕ್ಕೆ 28ಲಕ್ಷ ರೂ. ಅನುದಾನ

    ದೇವದುರ್ಗ: ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಶರಣಗೌಡ ಬಕ್ರಿ ಗೌರಂಪೇಟೆ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿಯಲ್ಲಿ ಉಳಿದ ಅನುದಾನದಲ್ಲಿ ಮೂಲಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಿ ಅನುದಾನ ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.

    2019-20ನೇ ಹಣಕಾಸು ಯೋಜನೆಯಡಿ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ 22.34 ಲಕ್ಷ ರೂ. ಹಾಗೂ 2019-20ನೇ ಸಾಲಿನ ಎಸ್‌ಎಪ್‌ಸಿ ಕ್ಯಾಪಿಟಲ್ ಅಸೆಟ್ಸ್‌ನಡಿ 6.27ಲಕ್ಷ ರೂ. ಒಟ್ಟು 28.61 ಲಕ್ಷ ರೂ. ಉಳಿತಾಯವಾಗಿದೆ. ಈ ಅನುದಾನದಲ್ಲಿ ಪಟ್ಟಣದ ಜನರಿಗೆ ಕುಡಿವ ನೀರು, ರಸ್ತೆ ದುರಸ್ತಿ, ಒಳಚರಂಡಿ ವ್ಯವಸ್ಥೆ, ಬೀದಿ ದೀಪ ನಿರ್ವಹಣೆ ಮಾಡಲು ನಿರ್ಣಯಿಸಲಾಯಿತು.

    ಅಧ್ಯಕ್ಷ ಶರಣಗೌಡ ಗೌರಂಪೇಟೆ ಮಾತನಾಡಿ, ಪುರಸಭೆ ಕಚೇರಿಯಿಂದ ಜಹಿರುದ್ದೀನ್ ವೃತ್ತ, ಅಂಬೇಡ್ಕರ್ ವೃತ್ತ, ಬಸವ ವೃತ್ತ, ಗಾಂಧಿ ವೃತ್ತದವರೆಗೆ ರಸ್ತೆಗಳ ದುರಸ್ತಿ, ಸ್ವಚ್ಛತೆ, ಕುಡಿವ ನೀರಿನ ಸಮಸ್ಯೆಯಿರುವ ಬಡವಾಣೆಯಲ್ಲಿ ಅನುದಾನ ಬಳಕೆಗೆ ಯೋಜನೆ ರೂಪಿಲಾಗುವುದು. ಹೊಸ ಬಡಾವಣೆಗಳಲ್ಲಿ ಬೀದಿ ದೀಪ ಅಳವಡಿಸಲಾಗುವುದು. ವಿವಿಧ ವಾರ್ಡ್‌ಗಳಲ್ಲಿ ಒಳಚರಂಡಿ ಸ್ವಚ್ಛತೆ, ಹೊಸ ಚರಂಡಿ ನಿರ್ಮಾಣ ಮಾಡಲು ಈ ಅನುದಾನ ಬಳಸಿಕೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts