More

    ಸಾಂಸ್ಕೃತಿಕ ಭವನಕ್ಕೆ 2ಎಕರೆ ಜಾಗ ನೀಡಿ; ದೇವದುರ್ಗ ತಾಲೂಕು ಹೂಗಾರ ಸಮುದಾಯ ಒತ್ತಾಯ

    ದೇವದುರ್ಗ: ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಹಾಗೂ ಶುಭ ಸಮಾರಂಭಕ್ಕಾಗಿ ಹೂಗಾರ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ಎರಡು ಎಕರೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ದೇವದುರ್ಗ ತಾಲೂಕು ಹೂಗಾರ ಸಮುದಾಯ ಸೋಮವಾರ ಮನವಿ ಸಲ್ಲಿಸಿತು.

    ತಾಲೂಕಿನಲ್ಲಿ ಹೂಗಾರ ಸಮುದಾಯ ಎಂಟು ಸಾವಿರ ಜನಸಂಖ್ಯೆ ಹೊಂದಿದ್ದು, ಹಲವರು ಕುಲಕಸುಬು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನಮ್ಮ ಸಮುದಾಯದ ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ಮಾಡಲು ಸೂಕ್ತ ಜಾಗವಿಲ್ಲ. ಶುಭ ಸಮಾರಂಭ ನಡೆಸಲು ಭವನದ ಕೊರತೆಯಿದೆ. ಖಾಸಗಿ ಭವನದಲ್ಲಿ ಕಾರ್ಯಕ್ರಮ ಮಾಡಲು ಸಾವಿರಾರು ರೂ. ಬಾಡಿಗೆ ನೀಡಬೇಕು. ಬಹುತೇಕರು ಬಡತನದಲ್ಲಿ ಜೀವನ ನಡೆಸುತ್ತಿದ್ದು, ಆರ್ಥಿಕ ಹೊರೆ ಬೀಳಲಿದೆ. ನಮ್ಮದೆಯಾದ ಸ್ವಂತ ಭವನ ಇದ್ದರೆ ಸಮುದಾಯದ ಜನರಿಗೆ ಅನುಕೂಲವಾಗಲಿದೆ.

    ಹೀಗಾಗಿ ಪಟ್ಟಣದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಹೂಗಾರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 2ಎಕರೆ ಜಾಗ ಮಂಜೂರು ಮಾಡಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಉಪಾಧ್ಯಕ್ಷ ಬಲಭೀಮ ಹೂಗಾರ, ಸಾಬಣ್ಣ ಹೂಗಾರ, ಗೌರವಾಧ್ಯಕ್ಷ ಮಲ್ಲಪ್ಪ ಹೂಗಾರ, ತಾಲೂಕು ಅಧ್ಯಕ್ಷ ಮಲ್ಲಣ್ಣ ಹೂಗಾರ ಮುಂಡರಗಿ, ಉಪಾಧ್ಯಕ್ಷ ನಿಜಪ್ಪ ಹೂಗಾರ, ಬಸವಲಿಂಗಪ್ಪ, ವೀರೇಶ ಹೂಗಾರ, ಶರಣಹೂಗಾರ ಹಂಚಿನಾಳ, ಬಸವರಾಜ ಸಲಿಕ್ಯಾಪುರ, ಭೀಮಣ್ಣ ಕೋಣಚಪ್ಪಳಿ, ವೀರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts