More

    ಮುಳುಗುವ ಹಂತಕ್ಕೆ ಹೂವಿನಹೆಡಗಿ ಸೇತುವೆ

    ದೇವದುರ್ಗ: ಕೃಷ್ಣಾ ತೀರದ ಹಳ್ಳಿಗಳಿಗೆ ನೆರೆ ಭೀತಿ ಎದುರಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

    ಗುರುವಾರ ತಡರಾತ್ರಿ ನಾರಾಯಣಪುರ ಜಲಾಶಯದಿಂದ 22ಕ್ರಸ್ಟ್ ಗೇಟ್ ಮೂಲಕ ಕೃಷ್ಣಾ ನದಿಗೆ 1,79,240 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇದರಿಂದ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗುವ ಹಂತ ತಲುಪಿದೆ.

    ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಿದ್ದು, ವೀರಗೋಟ ಶ್ರೀ ಆದಿಮೌನಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಿದೆ. ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ಗೂಗಲ್‌ನ ಶ್ರೀ ಅಲ್ಲಮಪ್ರಭು ದೇವಸ್ಥಾನ ಸಮೀಪ ನೀರು ಆವರಿಸಿವೆ. ನದಿದಂಡೆಯ ಹಲವು ರೈತರ ಜಮೀನಿಗೆ ನೀರು ನುಗ್ಗಿವೆ.

    ನೀರಿನ ಪ್ರಮಾಣ ಹೆಚ್ಚಾದರೆ ನದಿದಂಡೆ ಗ್ರಾಮಗಳಿಗೆ ನುಗ್ಗುವ ಸಾಧ್ಯತೆಯಿದೆ. ಸದ್ಯ ನಾರಾಯಣಪುರ ಜಲಾಶಯದಲ್ಲಿ 1.70ಲಕ್ಷ ಕ್ಯೂಸೆಕ್ ನೀರಿನ ಒಳಹರಿವಿದ್ದು, 29.61 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಕೃಷ್ಣಾ ಮೇಲ್ಭಾಗದಿಂದ ಜಲಾಶಯಕ್ಕೆ ಬರುವ ನೀರನ್ನು ಯಥಾವತ್ತಾಗಿ ನದಿಗೆ ಹರಿಸಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಎಇಇ ರಾಮನಗೌಡ ಹಳ್ಳೂರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts