More

    ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ಕೊಡಿ, ಬಸವರಾಜ ಪಾಟೀಲ್ ಸೇಡಂ ಸಲಹೆ

    ದೇವದುರ್ಗ: ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆಯಾಗಿದ್ದು, ತಂದೆ, ತಾಯಿ ಒಂದು ಸಾವಿರ ಶಿಕ್ಷಕರಿಗೆ ಸಮ ಇದ್ದಂತೆ. ಪಾಲಕರು ಮನೆಯಲ್ಲೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಹೇಳಿದರು.

    ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಉದ್ಯಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಕಲುಷಿತ ವಾತಾವರಣದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಬೆಳೆಸಬೇಕಿದೆ. ಕೇವಲ ಶಿಕ್ಷಣ ಕೊಡಿಸುವುದು ಪಾಲಕರ ಕೆಲಸವಲ್ಲ. ಶಿಕ್ಷಣದೊಂದಿಗೆ ಸಂಸ್ಕಾರ ಕೊಡಬೇಕಿದೆ. ಮಾನವೀಯ ಮೌಲ್ಯಗಳು, ಗುರು ಹಿರಿಯರನ್ನು ಗೌರವಿಸುವುದು, ಸಮಾಜ ಕಟ್ಟುವಂಥ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.

    ಉದ್ಯಾನಗಳು ಅಗತ್ಯವಾಗಿದ್ದು, ಅದನ್ನು ಸ್ಥಳೀಯ ಸಂಸ್ಥೆಗಳು, ಸರ್ಕಾರ ಮಾಡುವುದು ಕಷ್ಟ. ಹೀಗಾಗಿಯೆ ಜನರು ಅನುಕೂಲಕ್ಕಾಗಿ ಉದ್ಯಾನ ನಿರ್ಮಿಸಿಕೊಳ್ಳಬೇಕು. ಪರಿಸರ ಬೆಳೆಸುವುದರಿಂದ ಜೀವಸಂಕುಲ ಉಳಿಯಲು ಸಾಧ್ಯ ಎಂದು ಬಸವರಾಜ ಪಾಟೀಲ್ ಸೇಡಂ ಹೇಳಿದರು. ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಬಸವರಾಜ ಪಾಟೀಲ್ ಸೇಡಂ ಕಳೆದ 50 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts