More

    ದಸಂಸ ಸಂಸ್ಥಾಪಕ, ಹೋರಾಟಗಾರ ಬಿ.ಕೃಷ್ಣಪ್ಪ ದಲಿತರ ಆಶಾಕಿರಣ

    ದೇವದುರ್ಗ: ಹೋರಾಟಗಾರ ಬಿ.ಕೃಷ್ಣಪ್ಪ , ದಲಿತರಿಗೆ ಆಶಾಕಿರಣವಾಗಿ ಬೆಳೆದಿದ್ದರು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ( ಎಂಆರ್‌ಎಚ್‌ಎಸ್) ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ ಹೇಳಿದರು.

    ಪಟ್ಟಣದ ಶಾಂತಿನಗರ ವಾರ್ಡ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪರ 26ನೇ ಪುಣ್ಮಸ್ಮರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

    ದಲಿತರ ವಿರುದ್ಧ ನಡೆಯುತ್ತಿದ್ದ ಶೋಷಣೆ, ದಬ್ಬಾಳಿಕೆ ತಡೆಗಾಗಿ ಬಿ.ಕೃಷ್ಣಪ್ಪ 1973ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಸ್ಥಾಪನೆ ಮಾಡಿದರು. ಸಂಘಟನೆ ಮೂಲಕ ದಲಿತರಿಗೆ ನ್ಯಾಯ ಒದಗಿಸಿದರು ಎಂತು ತಿಳಿಸಿದರು.

    ಇದನ್ನೂ ಓದಿ: ದಲಿತರ ಅಭಿವೃದ್ಧಿಯನ್ನು ಕಾಂಗ್ರೆಸ್​ ಸಹಿಸುವುದಿಲ್ಲ: ಪ್ರಧಾನಿ ಮೋದಿ ವಾಗ್ದಾಳಿ

    ರಾಜ್ಯಾದ್ಯಂತ ಸಂಘಟನೆ ಕಟ್ಟಿ ಮೌಢ್ಯತೆ, ಅಸ್ಪಶ್ಯತೆ ನಿವಾರಣೆಗಾಗಿ ಹೋರಾಟ ಮಾಡಿದ್ದಾರೆ. ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿಸಿ ಕರ್ನಾಟಕದಾದ್ಯಂತ ಜಾಗೃತಿ ಮೂಡಿಸಿ ಅನಿಷ್ಠಸೇವೆ ತೊಲಗಿಸಲು ಶ್ರಮಿಸಿದರು. ಉಳುವವನೆ ಹೊಲದ ಒಡೆಯ ಹೋರಾಟಕ್ಕೆ ಬೆನ್ನೆಲುಬುವಾಗಿ ನಿಂತಿದ್ದರು ಎಂದು ಹೇಳಿದರು.

    ಅಲೆಮಾರಿ ಒಕ್ಕೂಟ ಜಿಲ್ಲಾಧ್ಯಕ್ಷ ಅಧ್ಯಕ್ಷ ಶಿವರಾಜ್ ರುದ್ರಾಕ್ಷಿ ಮಾತನಾಡಿದರು. ಈರಣ್ಣ ರುದ್ರಾಕ್ಷಿ, ಜಂಬಣ್ಣ ರುದ್ರಾಕ್ಷಿ, ಗೋಪಾಲ್ ರುದ್ರಾಕ್ಷಿ, ನಾಗಪ್ಪ ಉಪ್ಪಾರ್, ರಂಗನಾಥ್, ಚಂದ್ರಶೇಖರ್ ಛಲವಾದಿ, ಶಂಶುದ್ದೀನ್, ಶಿವಪುತ್ರ ಉಪ್ಪಾರ್, ಚರಣ್ ರಾಜ್ ಕೋಟೆ, ಮೋಹನ್ ಬಲಿದ್, ಶಿವು ದೊಂಡ್ಡಂಬಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts