More

    ಸಮವಸ್ತ್ರ ಗಮನ ಸೆಳೆವ ಅಂಗನವಾಡಿ ಮಕ್ಕಳು; ಮುಷ್ಟೂರು ಎರಡು ಕೇಂದ್ರಗಳಲ್ಲಿ ಪ್ರಯೋಗ

    ಕಾರ್ಯಕರ್ತೆಯರ ಉತ್ಸಾಹಕ್ಕೆ ಪಾಲಕರ ಮೆಚ್ಚುಗೆ | ಬಾಡಿಗೆ ಕಟ್ಟಡಕ್ಕೆ ಸುಣ್ಣ-ಬಣ್ಣದ ಅಲಂಕಾರ

    ದೇವದುರ್ಗ: ಮಕ್ಕಳಿಗೆ ಸಮವಸ್ತ್ರ, ಶೂ, ಬೆಲ್ಟ್, ಬ್ಯಾಗ್ ಮೊದಲಾದ ವ್ಯವಸ್ಥೆ ಕೊಡುವ ಮೂಲಕ ತಾಲೂಕಿನ ಮುಷ್ಟೂರು ಗ್ರಾಮದ ಎರಡೂ ಅಂಗನವಾಡಿ ಕೇಂದ್ರಗಳು ಡಿಫರೆಂಟ್ ಆಗಿ ಕಾಣುತ್ತಿವೆ.

    ಬಾಡಿಗೆ ಕಟ್ಟದಲ್ಲಿ ನಡೆಯುತ್ತಿರುವ 2ನೇ ಕೇಂದ್ರವನ್ನು ಸುಣ್ಣ-ಬಣ್ಣ ಬಳಿದು ಸಿಂಗರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಾದ ಚನ್ನಬಸಮ್ಮ ಪಾಟೀಲ್, ಚನ್ನಬಸಮ್ಮ ನಾಯಕ ಅವರ ಉತ್ಸಾಹವೇ ಇದಕ್ಕೆ ಕಾರಣ. ಮೊದಲು ಪಾಲಕರಿಗೆ ಸಮವಸ್ತ್ರದ ಮಹತ್ವ ತಿಳಿಸಿ, ಅವರನ್ನು ಒಪ್ಪಿಸಿದ್ದಾರೆ. ಇದರಿಂದ ಸರ್ಕಾರಿ ಅಂಗನವಾಡಿ ಮಕ್ಕಳು ಕಾನ್ವೆಂಟ್ ಶಾಲೆ ಮಕ್ಕಳಂತೆ ಕಾಣುವಂತಾಗಿದೆ.

    ಸಮವಸ್ತ್ರ ಧರಿಸಿಕೊಂಡು ಅಂಗನವಾಡಿಗಳಿಗೆ ಬರುವುದು ಕಡ್ಡಾಯವಲ್ಲ ಎಂದು ಎರಡು ವರ್ಷಗಳ ಹಿಂದೆ ಅಲಿಖಿತ ನಿಯಮ ಜಾರಿಗೆ ತರಲಾಗಿದ್ದರೂ, ಮಕ್ಕಳಲ್ಲಿ ಚಿಕ್ಕನಿಂದಲೇ ಶಿಸ್ತು ಬೆಳೆಸಿದರೆ ಒಳ್ಳೆಯದು ಎಂಬ ಕಾರಣ ಈ ವ್ಯವಸ್ಥೆ ತರಲಾಗಿದೆ ಎಂಬುದು ಕಾರ್ಯಕರ್ತೆಯರ ಅನಿಸಿಕೆ. ಇವರ ಈ ಕೆಲಸಕ್ಕೆ ಸಂಘ-ಸಂಸ್ಥೆಗಳು, ಗ್ರಾಮಸ್ಥರೂ ಕೈಜೋಡಿಸಿದ್ದಾರೆ. ಬೆಂಗಳೂರಿನ ಶೃತಿ ಸಂಸ್ಕೃತಿ ಸಂಸ್ಥೆ ಹಾಗೂ ಇಲಾಖೆ ಅಧಿಕಾರಿಗಳು ಈ ಕೇಂದ್ರಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಮಕ್ಕಳಿಗೆ ಪಾಟಿ, ಪೆನ್ಸಿಲ್ ಮತ್ತಿತರ ಕಲಿಕಾ ವಸ್ತುಗಳನ್ನು ನೀಡಿದ್ದಾರೆ. ಉಳಿದ ಅಂಗನವಾಡಿ ಕೇಂದ್ರಗಳಿಗೆ ಇವು ಮಾದರಿಯಾಗಿವೆ.

    ಮಕ್ಕಳಲ್ಲಿ ಶಿಸ್ತು ಬೆಳೆಸುವ ನಿಟ್ಟಿನಲ್ಲಿ ಸಮವಸ್ತ್ರ ಜಾರಿ ಮಾಡಿದ್ದೇವೆ. ಇದು ಕಡ್ಡಾಯವಲ್ಲ. ಪಾಲಕರಿಗೆ ತಿಳಿವಳಿಕೆ ನೀಡಿ 2 ವರ್ಷಗಳ ಹಿಂದೆ ಜಾರಿಗೆ ತಂದಿದ್ದೇವೆ. ಅಂಗನವಾಡಿ ಕೇಂದ್ರಗಳಲ್ಲಿ ಕಲಿಕಾ ವಾತಾವರಣ ನಿರ್ಮಿಸುವುದರ ಜತೆಗೆ ಮಕ್ಕಳಲ್ಲಿ ಏಕತೆ ಮೂಡಿಸುವುದು ನಮ್ಮ ಉದ್ದೇಶ.
    | ಚನ್ನಬಸಮ್ಮ ಪಾಟೀಲ್, ಚನಬಸ್ಸಮ್ಮ ನಾಯಕ
    ಅಂಗನವಾಡಿ 1 ಮತ್ತು 2ನೇ ಕೇಂದ್ರಗಳ ಕಾರ್ಯಕರ್ತೆಯರು

    ಮುಷ್ಟೂರು ಅಂಗನವಾಡಿ ಕೇಂದ್ರಗಳು ತಾಲೂಕಿನಲ್ಲೇ ಮಾದರಿಯಾಗಿವೆ. ಬಾಡಿಗೆ ಕಟ್ಟಡ ಸಿಂಗರಿಸಿ ಮಕ್ಕಳಿಗೆ ಉತ್ತಮ ಊಟ, ಶಿಕ್ಷಣ ನೀಡುತ್ತಿದ್ದಾರೆ. ಇಂಥ ಕೇಂದ್ರ ನೋಡಿ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಎಲ್ಲ ಕಡೆ ಇದೇ ಪ್ರಯೋಗ ಮಾಡುವ ಯೋಚನೆಯಿದೆ.
    | ವೆಂಕಟಪ್ಪ ಸಿಪಿಡಿಒ, ದೇವದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts